ಸುಮ್ಮನೇ ಕೂಡ್ರೋ ಚಾಳಿ.....
ಅವನ ಹೆಸರು ವೀರೇಂದ್ರ ಕತ್ತಿ, ಇಂಗ್ಲೀಷನ್ಯಾಗ ಆದದ್ದು ಕಟ್ಟಿ. ಇವನಿಗೆ ನಾವೆಲ್ಲಾ ಕರಿತಿದ್ದಿದ್ದು " ಕಟ್ಟ್ಯಾ" ಅಂತ. ಇವನೊಬ್ಬ Unimmaginable character ದವನು. Department ನ H.O.D ಕರೆದು, ಯಾಕಪ್ಪಾ X ಅನ್ನೋ Lecturer ಕ್ಲಾಸ ಅಟೆಂಡ ಆಗತಾ ಇಲ್ಲಾ ಅಂತ ಕೇಳಿದರ... ಇಲ್ಲಾ ಸರ್, ಅವರು ಹೇಳಿದ್ದು ತಿಳಿಯಂಗಿಲ್ಲಾ, ಅಲ್ಲದ ಅವರು just ಕುರ್ಮಿ ಬುಕ್ ನಲ್ಲಿರೋದನ್ನ ರಿಪೀಟ ಮಾಡತಾರ. So no extra knowledge or no proper answers to our practicle doubts. ಅದಕ್ಕ ಅಟೆಂಡ ಆಗಲ್ಲಾ, ಅಂತ ನೇರವಾಗಿ ಹೇಳಿ, Practicale exams ನಲ್ಲಿ, Internal Assessments ನಲ್ಲಿ ಹೊಡೆತಾ ತಿಂದಂತಹ "ಚೀಜ್" attitude ನವನು. ಬೆಳಿಗ್ಗೆ ಹಲ್ಲು brush ಮಾಡೋಕು ಇವನಿಗೆ ಬೇಸರ. Exam ನಲ್ಲಿ, Answer in two sentenses ಅಂತ ಇದ್ದ question ಗಳಿಗೆ , ದೇವರಾಣೆಯಾಗಿಯೂ 3rd sentense ಬರಿದಿಲ್ಲಾ. ಆದರ, ಬೇರೆಯವರಿಗಾಗಿ, ಅವರು ಪಾಸ ಆಗಬೇಕಂತ, ಬೇಕಾದಷ್ಟು ಕರಾಮತ್ತು, set-up ಮಾಡಿ, ತನ್ನ reputation ಹಾಳು ಮಾಡಿಕೊಂಡತವ. ಇಂತವನು College election ನಲ್ಲಿ ಸೋತ ಅಂತ ನಾವೆಲ್ಲಾ ತಲೆಕೆಡಿಸಿಗೊಂಡು, ಹಾಸ್ಟೆಲ್ ಮೂಲೆ ಸೇರಿದರ, ಇವನೇ oppositionನವರ ಜೊತೆ ಕೂತು ಸಿಗರೇಟ ಎಳಿತಿದ್ದ. ಅದೆಲ್ಲಾ ಇರಲಿ, college days ನಲ್ಲಿ ಇವನಂತ ಲೇಝಿ ಪರ್ಸನ್ ಇನ್ನೊಬ್ಬನಿಲ್ಲಾ ಅಂತ ನಾವೆಲ್ಲಾ ಅವನಿಗೆ ಕಾಡತಿದ್ದ್ವಿ - ಅವನೂ ಒಂತರಹ ಹಾಗೇ ಇದ್ದಾ ಅನ್ನಿ.
ಕೊನೆಗೂ ಕಷ್ಟಪಟ್ಟು, ಏನೇನೋ ಕರಾಮತ್ತುಗಳನ್ನ ಮಾಡಿ engineering ಮುಗಿಸಿ, ನೌಕರಿ ಹುಡುಕಾಟದ ನೋವುಗಳನ್ನ ಅನುಭವಿಸಲಾರಂಭಿಸಿದ ದಿನಗಳವು, ಆದರೆ ಈ ಕಟ್ಟ್ಯಾ ಮಾತ್), ಸಿಕ್ಕಿದ ಕೆಲಸಗಳಲ್ಲೇ, ಅವುಗಳ ಲೆವೆಲ್, ಪಗಾರ ನೋಡದೇ, ಮುಂಜಾನೆಯಿಂದ ರಾತ್ರಿವರೆಗೂ busy ಆಗಿರುತ್ತಿದ್ದಾ. ಸ್ವಲ್ವೇ ದಿನಗಳಲ್ಲಿ ಪುಣೆಯಲ್ಲಿ ಒಂದು ಚೆನ್ನಾಗಿರೋ ಕೆಲಸಾನೂ ಗಿಟ್ಟಿಸಿದ. ಆದರೆ ನನ್ನಂತ ಕೆಲವು ಹುಡಗರು ನಮ್ಮ ಲೆವಲ್ಗೆ ತಕ್ಕಂತ ಕೆಲಸಾ ಹುಡುಕೋತ, system ಅನ್ನು ಜರಿಯುತ್ತಾ, canteen ನಲ್ಲಿ ಕಾಲಾಕಳೆಯೋದೆ ಕೆಲಸಾ ಮಾಡಕೊಂಡ್ಬಿಟ್ವಿ. ಆಗ ಈ ಕಟ್ಟ್ಯಾ ಹೇಳಿದ ಮಾತೇ ... ಲೇ ಉಲ್ಲ್ಯಾ! ಮಗನೆ, ಏನಾದರೂ ಮಾಡಲೇ, ಖಾಲಿ ಕೂಡೋ ಚಾಳಿ ಭಾಳಾ ಕೆಟ್ಟದ್ದು, ಒಂದ್ವೇಳೆ ಖಾಲಿ ಕೂಡೋ ಚಾಳಿ ಬಿತ್ತಂದ್ರ ನೋಡು ಆಮೇಲೆ ಭಾರೀ danger.
ಇತ್ತಿತ್ತಲಾಗಿ, ನನಗೆ ಹಂಗೆ ಅನಿಸುತ್ತಿದೆ. ಯಾವುದೇ ಕೆಲಸದಲ್ಲೂ Interest ಬರತಾಯಿಲ್ಲಾ. ಕೇವಲ ಸುಮ್ಮನೇ ಕೂಡಬೇಕಂತ ಅನಿಸ್ತದ. office ನಲ್ಲಿ ಕೆಲಸ ಇದ್ದರೂ ಬೇಜಾರು, ಇಲ್ಲದಿದ್ದರೂ ಬೇಜಾರು. swimming, cricket ಯಾವದರಲ್ಲೂ ಆಸಕ್ತಿನ ಬರತಾಯಿಲ್ಲಾ. ನನಗೇನಾದರೂ ಸುಮ್ಮನೇ ಕೂಡೋ ಚಾಳಿ ಬಿತ್ತಾ ? No No , never, ಇದೆಲ್ಲಾ ಯಾವದೋ ಒಂದು unethical discussion ನಿಂದ ಆಗತಾ ಇರೋದು ಅನ್ನೋದಂತು ಸತ್ಯಾ. ಈ discussion ಅನ್ನೋದಂತು ಒಂತರಹದ ವಿಚಿತ್ರವಾದ, ಕಲ್ಪನಾತೀತವಾದ event ಆಗಿರೋದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ನಮ್ಮ IT industry boss ಗಳ ಜೊತೆ ಮಾಡೋ ಮೀಟಿಂಗ್ಸ್, ಡಿಸ್ಕಶನ್ಸ ಗಳಂತೂ ಚಿತ್ರ, ವಿಚಿತ್ರವಾದ, pre-decided ವಿಷಯಗಳ, ಆಶಾರಹಿತವಾದ, culprit ಮನಸ್ಸುಗಳ, ವಿವೇಚನಾರಹಿತವಾದ, self-secured kind of ಆಗಿರುವದು ನಿಜಕ್ಕೂ ವಿಪರ್ಯಾಸ. Motivate ಮಾಡದಿದ್ದರೂ, De-motivate ಮಾತ್ರ ಮಾಡಬಾರದೆಂಬ ಸಾಮಾನ್ಯ ಧ್ಯೇಯವೂ ಇಂದಿನ so called discussions ಗಳಲ್ಲಿ ಕಾಣದಿರುವದು ಹಾಸ್ಯಾಸ್ಪದ. ರಾಜಕೀಯದ ದೊಂಬರಾಟ ಈ educated people ಗಳ ಕೆಲಸ, ಮನಸ್ಸು, ಭಾವನೆ ಹಾಗೂ decisionsಗಳಲ್ಲಿ ಹಾಸುಹೊಕ್ಕಾಗಿರುವದು ಬೇಸರದ ಸಂಗತಿ. ಜಾತಿ, ಭಾಷೆ, ಸ್ವಹಿತ ಪ್ರೇರಿತ ಜನರು ಇಂದಿನ IT industryಯ key positionsಗಳಲ್ಲಿ ಕುಳಿತಿರುವದು, ಮುಂದಿನ ದಿನಗಳಲ್ಲಿ IT industry, ಮುನಸಿಪಾಲ್ಟಿ ಲೆವಲ್ ಗೆ ಬರೋದಂತು ನಿಜ.
Buttering the boss ಅಥವಾ Yes boss culture ಬೆಳಿತಿರೋದು, ಬೆಳೆಸುತ್ತಿರೋದು, Question ಮಾಡಿದರೆ ,attitude ಸರಿ ಇಲ್ಲಾ ಅನ್ನೋದು ಇಂದಿನ IT industry ಯ ಭೂಷಣಗಳಾಗಿ ಬೀಡುಬಿಟ್ಟಿರುವದು ಮುಂದಿನ ದಿನಗಳಲ್ಲಿ ಈ ಉದ್ಯಮದ ಅವನಿತಿಗೆ ತುಪ್ಪಸುರಿತಿವೆ.
ಹೋಗಲಿ ಬಿಡಿ, ಕಾಲಾಯ ತಸ್ಮ್ಯನಮಃ ! ನಾವೂ ಗಾಳಿಬಿಟ್ಟಾಗ ತೂರಿಕೊಳ್ಳೋಣ. ಅದೇ, ಈ ಸುಮ್ಮನೇ ಕೂಡೋ ಚಾಳಿ ಅದ ಅಲ್ಲಾ ಅದು ನಿಜಕ್ಕೂ ತುಂಬಾ ಅಪಾಯಕಾರಿ. ಇದರಲ್ಲಿ ಎರಡು ಅರ್ಥ ಇವೆ. ಮೊದಲನೆಯದು, ಯಾರಾದರೂ , boss ಸಹಾ ಆಗಿರಬಹುದು, ಅವರು ಏನಾದರು ತಪ್ಪು ನಿರ್ಧಾರ ತೆಗೆದುಕೊಂಡಾಗ, purposefully ಯಾರಿಗಾದರೂ ಅನ್ನ್ಯಾಯ ಮಾಡಿದಾಗ ಅಥವಾ ಯಾರಿಗಾದರೂ unethical way ನಲ್ಲಿ boost ಮಾಡಿದಾಗ, ನಮಗ್ಯಾಕೆ ಬೇಕು ಅಂತಾ ಸುಮ್ಮನಿರೋದು. ಇವತ್ತು ನಾವು ಸುಮ್ಮನಿದ್ದರೆ , next queue ನಲ್ಲಿ ನಾವೇ ಯಾಕಿರಬಾರದು. ಬೇರೆಯವರಿಗಾದ ಅನ್ನ್ಯಾಯ ನಮಗೂ ಯಾಕಾಗಬಾರದು? ಎರಡನೆಯದು, not interested in any thing. ಅಂದರೆ ಮೇಲೆ ಹೇಳಿದ ಹಾಗೆ , ಯಾವುದೇ ಕೆಲಸದಲ್ಲೂ ಆಸಕ್ತಿ ತೋರದಿರುವದು. ನೀವೆಲ್ಲಾ ನೋಡಿರಬಹುದು. ನಮ್ಮ ಪಕ್ಕದ ಮನೆಯ ಹುಡುಗ/ಹುಡುಗಿ ಆಗಿರಬಹುದು ಅಥವಾ ನಮ್ಮ ಗೆಳೆಯ ಆಗಿರಬಹುದು. We know they are very very brilliant and have the capability to achieve anything. But alas! everything is waste. They are in a mental status that they love to sit idal doing nothing. ಇಂತಹ ಒಂದು mental status ಗೆ ಬಂದು ಬಿಟ್ಟರೇ ಮುಗಿತು. Life is waste. ಅದಕ್ಕೇ ನಮ್ಮ ಹಿರಿಯರು ಹೇಳಿರೋದು, ಉದ್ಯೋಗಂ ಪುರುಷ ಲಕ್ಷಣಂ. ಇದನ್ನೇ ನನಗೆ ಅ ಕಟ್ಟ್ಯಾ ಮನವರಿಕೆ ಮಾಡಿಕೊಟ್ಟಿದ್ದು. He gave me few examples and changed my mind set.
ಅದಕ್ಕೇ ಇತ್ತೀಚಿನ ದಿನಗಳ ನನ್ನ ಖಾಲಿ ತಲೆಯನ್ನ ಮತ್ತೆ ಚಾರ್ಜ ಮಾಡಕೊಳ್ಳೋಕೆ , ಅವನು ಕೊಟ್ಟ ಕೆಲ examples ಗಳನ್ನ ನೆನೆಸಿಗೊಂಡು ಈ ಬ್ಲಾಗ ಬರಿತಿರೋದು.
ಕೊನೆಯ ಹನಿ :
ನನ್ನ ಹೈಸ್ಕೂಲಿನ ಕನ್ನಡದ ಸರ್ ಆದ ಹಿರೇಮಠರವರು ಹೇಳುತ್ತಿದ್ದ ಒಂದು ವಾಕ್ಯ.
" ಏನಾದರೂ ಅಗು ಮೊದಲು ಒಳ್ಳೆಯ ದುಡಿಮೆಗಾರನಾಗು, ಅಂದರೆ automatic ಆಗಿ ಮಾನವ ಆಗತೀಯ "
ಪ್ರೀತಿ ಪೂರ್ವಕವಾಗಿ,
The Complex mind...