They don't have brain! but only heart ...
ಇದೇನ ವಿಚಿತ್ರಾ ಅನ್ನಾಕತ್ತಿರಾ? ಇವರೆಲ್ಲಿಯವರಪಾ ತಲಿ ಇಲ್ದವರು, ತಲೀನ ಇಲ್ಲಂದವ್ಯಾಲೆ ಮನುಷ್ಯರೊ ಅಥವಾ ಮತ್ತೇನರನೋ, ಏನಿದರ ಮರ್ಮಾ ?. ಹೌದ್ರೀ ಸರ್..ಇದೊಂದು ತಲಿಕೆಡಿಸಿಗೊಳ್ಳೊ ಸಮಾಚಾರನ, ಇವರು ಜೀವಸೋ ರೀತಿ, ಇವರ ಹುಂಬತನ, ಇವರು ಮಾಡೊ ದೋಸ್ತಿ, ಬೇರೆಯವರನ್ನ ಗೌರವಿಸೋ ರೀತಿ, ಎಲ್ಲಾಕ್ಕಿಂತ ಹೆಚ್ಚಾಗಿ ಈ ಜನರು ತೋರೊ ಪ್ರೀತಿ, ಆದರ, ಅಭಿಮಾನ, ಈ ತರಹದ ಒಂದು ಕಲ್ಪನೆ ಹುಟ್ಟುಹಾಕೋದು ಸಹಜ ಅದ ನೋಡ್ರಿ. ಅವರು ಬೇರೆ ಯಾರೂ ಅಲ್ಲಾ, ನಮ್ಮವರೇ ಆದ "ಉತ್ತರ ಕರ್ನಾಟಕದ ಜನ".
ಈ ಗಂಡುಮೆಟ್ಟಿನ ನಾಡಿನ ಜನರ ಗುಂಡಿಗೆ ಎಷ್ಟು ಗಟ್ಟಿಯಾಗಿದೆಯೋ, ಅದಕ್ಕಿಂತ ಜಾಸ್ತಿ ಅವರ ಮನಸ್ಸು soft ಅದ. ಬೇರೆಯವರಿಗಾಗಿ ತುಡಿಯುವ heart ಅದ, प्राण जाए पर वचन न जाय ಅನ್ನೋ ಛಲಾ ಅದ, ಕೊಟ್ಟ ಮಾತಿಗೆ ತಪ್ಪಲಾರೆನು ಅಷ್ಟ ಅಲ್ಲಾ ಕೆಟ್ಟ ಯೋಚನೆನೂ ಮಾಡಲಾರೆನು ಅನ್ನೋ ಮಾತಿಗೆ ಕಟ್ಟು ಬಿದ್ದು , ಮೈಮೇಲೆ ಸಾಗರದಷ್ಟು ಕಷ್ಟಗಳನ್ನ ಎಳಕೊಂಡಿದ್ದದ. ಮನೆಗೆ ಮಾರಿ , ಊರಿಗೆ ಉಪಕಾರಿ ಅನ್ನೋ ಮಾತಿಗೆ ಇವರು ಅತೀ ಸಮೀಪ ಇದ್ದಾರ. ಆದರ, ಮಾತಿನ್ಯಾಗ ಇದರ ತದ್ವಿರುದ್ಧ . ಕೆಲವು ಜನರಿಗಂತೂ ಉತ್ತರ ಕರ್ನಾಟಕದ ಭಾಷೆಯಂದ್ರ ಮೈಯಲ್ಲಾ ಉರಿಯುತ್ತೆ. Very rough slang!! sometimes it is really very difficult to daigest the words. But nothing can be done. It is a part of their culture. ಆ ಕೆಲವೊಂದು Typical words ಉಪಯೋಗ ಮಾಡದೇ ಇದ್ದ್ರ, ಮಾತಾಡಿದವನಿಗೂ, ಕೇಳುವನಿಗೂ ಏನೋ ಕಳಕೊಂಡಂಗ ಅನ್ನೋದಂತೂ ನಿಜಾ. ಪ್ರಾಣೇಶ ಗುಡಿ ( ಅಭಿನವ ಬೀchi )ಅವರ ಭಾಷಣಾ ಕೇಳೇ ತಿಳಕೊಳಬೇಕು ಈ ಭಾಷೆಯ ಗಮ್ಮತ್ತು.
ಇದನ್ನೆಲ್ಲಾ ಇಲ್ಲ್ಯಾಕ ಬರಿತಿದ್ದೀನಿ ಅಂದ್ರ, ನಿನ್ನೆ ರಮೇಶ ಅಭಿನಯದ "Crazy ಕುಟುಂಬ" ಸಿನಿಮಾ ನೋಡಿದೆ. After long time, a good movie on North Karnataka life style. Till now, our own Kannada movies used this life, culture just for fun and sad thing is they did/do not have any other thought , insight of the power of this life style. On the other hand, they know that, if you need the real "Kannada" then it is again North Karnataka culture, and hence they picturaized all Kannada motive songs in Hubballi-Dharawad.
Crazy ಕುಟುಂಬ ಒಮ್ಮೆ ನೋಡಲೇ ಬೇಕಾದ ಸಿನಿಮಾ. ಎಷ್ಟೇ ಕಷ್ಟ ಬಂದರೂ, ಮಗಳಿಗಾಗಿ, ಮೊಮ್ಮಗಳಿಗಾಗಿ ತಮ್ಮ ಮನೆಯನ್ನೇ ಯಾವುದೇ second thought ಇರದೇ ಅಡುವಿಡುವ ಪ್ರಸಂಗ, ನನಗೇನಾಗೈತ್ರಿ, ಅರಾಮ ಅದಿನಿ ಅನ್ನೋ ಆ ಮನಿ ಯಜಮಾನತಿ, Step brother ಆದರೂ ಅಣ್ಣಾ ಅನ್ನೋ ಕಾರಣಕ್ಕಾಗಿ ಕುಸ್ತಿಯಲ್ಲಿ ಸೋಲೊ ತಮ್ಮಾ , ಇವೆಲ್ಲಾ ಸುಲಭದ ಮಾತಲ್ಲಾ . ಕೊನೆಯಲ್ಲಿ ರಮೇಶ ಹೇಳೊ ಮಾತುಗಳು ನಿಜಕ್ಕೂ ಅಭಿಮಾನಪಡುವಂತಹವು. These people think from heart ಅನ್ನೋ ಮಾತನ್ನ ತೋರಿಸಿ ಕೊಟ್ಟಿದ್ದಾರೆ.
Apart from this, watched few events of Commonwealth game and felt really happy by the Indian performance but on the other hand felt very bad about the athletes' problems after reading about them. Why we or our Govt not trying to uplift, support those champions ? guess this is the question hit everyone's mind now. Good that our Govt atleast announced 10Lac each to the individulas who won the gold. We all know, our villages have lot more talents like this but alas! no proper facilities, ground available and thus ಅನೇಕ ಸಸಿಗಳು ಚಿಗಿಯುವ ಮುನ್ನವೇ ಮುರಿದು ಬೀಳುತ್ತಿವೆ. ಇದಕ್ಕೆಲ್ಲಾ ಪರಿಹಾರ ಇದೆಯೇ, ಇದೊಂದು Millian Doller ಪ್ರಶ್ನೆ....
Got a Audi A4 car last week ( ofcourse second hand..can't dream of buying a new Audi with this salary... :)) will write about that next time.
ಕೊನೆಯ ಹನಿ : ಓ ನನ್ನ ಚೇತನ ಆಗು ನೀ ಅನಿಕೇತನ.. ರೂಪ ರೂಪಗಳನು ದಾಟಿ , ನಾಮಕೋಟಿಗಳನು ದಾಟಿ ( ಕುವೆಂಪುರವರ ಕವನದ ಸಾಲು )
ಪ್ರೀತಿ ಪೂರ್ವಕವಾಗಿ,
The complex mind...
No comments:
Post a Comment