ಭಜಗೋವಿಂದಂ
ನಿನ್ನೆ ಶನಿವಾರ, ಹಾಗೆ as a part of my weekly cleaning activity, was trying to clean , organize my bags, suitcases etc.., and found a old unlabelled CD and just with a thought I kept it aside so that I can check the content of that later. ನಿಮಗೂ ಆಗಿರಬೇಕು ಕೆಲವೊಂದು ವಸ್ತುಗಳು ಎಷ್ಟೇ ಹುಡುಕಿದರೂ ಬೇಕಾದಾಗ ಸಿಗೋದೇಯಿಲ್ಲಾ, but we get them at an unnoticable time and place and will make us to think a lot ಅಂದರೆ ನಮ್ಮ ಸ್ತುಪ್ತ ಮನಸ್ಸನ್ನು ಜಾಗ್ರತಗೊಳಿಸುತ್ತವೆ. ಮಲಗಿದ್ದ ನಮ್ಮನ್ನು ಬಡಿದೆಬ್ಬಿಸುತ್ತವೆ.
Just as a dailly activity ನಿನ್ನೆನೂ ಕೂಡ ಸಾಯಂಕಾಲದ walkingಗೆ ಹೋಗತಿದ್ದೆ. Walking ಅಂತ ಹೇಳಿದರೂ ಅದು actually a drive in my Audi for around 10km, to fresh-up myself from Incidents, issues, meetings etc.., and make my mind empty ಯಾಕಂದರೆ ಖಾಲಿ ತಲೆಯಲ್ಲೇ Complex ಆಲೋಚನೆಗಳು ಬರೋದು. ಅಂದರೇ ಬ್ಲಾಗ ಬರೆಯೋಕೆ ಸರಕು ಸಿಗೋದು. So ಹಾಗೆ ಕಾರ ಸ್ಟಾರ್ಟ್ ಮಾಡಿ, ಸಿಕ್ಕ ಆ ಹಳೆ CDn ಪ್ಲೇಯರಿಗೆ ತುರುಕಿದೆ. ಕೂಡಲೇ, ಅದೇನು ಅದ್ಭುತವೋ ಎಂಬಂತೆ, ಈ ಜಗತ್ತು ಕಂಡ one of the finest, famous singer ಸುಬ್ಬುಲಕ್ಷ್ಮಿ ಅವರ ಕಂಠಸಿರಿಯಿಂದ, ಜೀವದ ಸಾರವನ್ನೇ ಹೇಳುವ, ಆದಿ ಶಂಕರ ವಿರಚಿತ ಅದ್ಭುತ ಹಾಡು, infact I call it as ಶ್ಲೋಕ ಹೊರಬಂತು. ಭಜಗೋವಿಂದಂ,ಭಜಗೋವಿಂದಂ...ಗೋವಿಂದಂ ಭಜೇ ಮೂಢಮತೆ !! This is one of the best shlokas I ever heard. This is the shloka which tells you the importance of Bhakti towards God, Love towards others ಒಟ್ಟಿನಲ್ಲಿ ಜೀವದ ಸಾರ, ಮಹತ್ವ, ಜೀವಿಸಬೇಕಾದ ರೀತಿ, ನೀತಿಗಳ ಬಗ್ಗೆ ಮನಮುಟ್ಟುವಂತೆ ಉಪದೇಶಿಸುತ್ತದೆ.
ನಾವೇನಾದರೂ ಅದರಲ್ಲಿ ಹೇಳಿದಂತೆ ನಡೆದರೆ, it can give us enormous amount of power to live with "ಮನಃಶಾಂತಿ". ಸುಖಜೀವನದ ಪರಿಕಲ್ಪನೆ ಕೇವಲ ಕಲ್ವನೆಯಾಗದೇ, ನಾವೆಲ್ಲಾ ತುಂಬಿದ ಕೊಡಗಳಂತೆ ಜೀವನ ಮಾಡಬಹುದು. ಜಗತ್ತೆಲ್ಲಾ ಶಾಂತಿಯಿಂದ, ಭಾತ್ರತ್ವದ ಜೀವನ ನಡೆಸಬಹುದು, we may not need any "NATTO" force to bring peace in our lives.
The 25th shloka of Bhajagovindam impressed me a lot...
शत्रौ मित्रे पुत्रे बन्धौ,
मा कुरु यत्नं विग्रहसन्धौ।
सर्वस्मिन्नपि पश्यात्मानं,
सर्वत्रोत्सृज भेदाज्ञानम् ||
ಇದರ ಅರ್ಥ : ನಿನ್ನ ಮಿತ್ರ, ಮಕ್ಕಳು, ಬಂಧು, ತಾಯಿ, ತಂದೆಯವರ ಪ್ರೀತಿಗಳಿಸಲು ಹೋರಡಬೇಡ
ನಿನ್ನ ವೈರಿ, ದಾಯಾದಿಗಳ ಜೊತೆ ವೈರತ್ವಕ್ಕಾಗಿ, ಹೋರಾಟಕ್ಕಾಗಿ ಪ್ರಯತ್ನಿಸಬೇಡ,
ಬದಲಾಗಿ ನಿನ್ನನ್ನೇ ಅವರಲ್ಲಿ ಕಾಣು, ನಾನು, ನನ್ನದು, ಪರರದು ಎಂಬು ದ್ವಿಮುಖ ವಿಚಾರವನ್ನೇ ಬಿಡು.
ಎಷ್ಟು ಅದ್ಭುತ ವಿಚಾರವಲ್ಲವೇ ? ನಾನೇ ನೀನು, ನೀನೇ ನಾನು ಎಂಬ ಸಂಗತಿ ನಿಜವಾದರೆsss, !!! ಅದನ್ನೇ ನಮ್ಮ ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿದ್ದು... ಎಲ್ಲರೊಳಗೊಂದಾಗು ಮಂಕುತಿಮ್ಮ. ಅಹ್ಂ ಬ್ರಹ್ಮಾಸ್ಮಿ! ನಾನು ನೀನು ಎಂಬುದು ಒಂದಾದಾಗ, ದೇವರಿಗೂ ನಮಗೂ ಎಲ್ಲಿಯ ವ್ಯತ್ಯಾಸ. ನನ್ನಲ್ಲಿ ದೇವರಿರುವದು ನಿಜವಾದರೆ, ನಾನೇ ಕಾಣುತ್ತಿರುವ ಇನ್ನೊಬ್ಬನಲ್ಲೂ ದೇವರಿರುವದು ಅಷ್ಟೇ ಸತ್ಯ. ಅದ್ವೈತದ ಕಲ್ವನೆಯೂ ಇದೇ ತಾನೆ ? ಅಷ್ಟೇ ಅಲ್ಲಾ, ಭಕ್ತಿ ಪರಂಪರೆಯೂ ಹೇಳಿರುವದು ಇದೇ ಭಜಗೋವಿಂದಂನ ಸಾರ.
ಹೋಗ್ಲಿಬಿಡಿ ದ್ವೈತ, ಅದ್ವೈತಗಳ ಬಗ್ಗೆ ಸಾಧ್ಯವಾದರೆ ಮುಂದಿನ ಬ್ಲಾಗನಲ್ಲಿ ಬರಿತೀನಿ. ಏಕೋ ಗೊತ್ತಿಲ್ಲ, ಭಜಗೋವಿಂದಂ ಕೇಳಿದಮೇಲೆ ಮನಸ್ಸು ಆಧ್ಯಾತ್ಮದತ್ತ( ಸನ್ಯಾಸತ್ವ ಎಂದು confuse ಆಗಬೇಡಿ ) ವಾಲುತ್ತಿದೆ. ಎಷ್ಟು ನಿಜಾ ಅಲ್ವಾ, ಎಲ್ಲರಲ್ಲೂ ತನ್ನನ್ನೇ ಕಂಡರೆ, ತನ್ನನ್ನು ತಾನು ಪ್ರೀತಿಸದಷ್ಟು ಬೇರೆಯವರನ್ನೂ ಪ್ರೀತಿಸಬಹುದಲ್ಲವೇ ? ಜಗವೆಲ್ಲಾ ಒಂದು ಕುಟುಂಬವಾಗಿ " ವಸುಧೈವ ಕುಟುಂಬಕಂ" ಅನ್ನೋ ಹಾಗೆ ಎಲ್ಲರೂ ಸ್ನೇಹಜೀವಿಗಳಾಗಿ ಬಾಳಬಹುದಲ್ಲವೇ?. ಪರರಲ್ಲಿ ತನ್ನದೇ ಅಸ್ಥಿತ್ವ ಕಂಡಾಗ Difference of opinion ಅನ್ನೋದಕ್ಕೆ ನೆಲೆನೇ ಇರದಂತಾಗಬಹುದಲ್ಲವೇ?.
ಇದನ್ನು ಓದಿದ ಮೇಲೆ ನೀವು ಕೇಳಬಹುದು... ಏನಪ್ಪಾ ಕನಸುಕಾಣುತ್ತಿದ್ದಿಯಾ ???? ಈ ಕನಸು ನನಸಾದರೆ...
ಕೊನೆಯ ಹನಿ:
ಡಿ.ವಿ.ಜಿ ಯವರ ಕಗ್ಗದ ಒಂದು ನುಡಿ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆವಿಧಿಯ ಸಿರಿಯೆ,
ಬೆಲ್ಲಸಕ್ಕರೆಯಾಗು ದೀನದುರ್ಬಲರಿಗೆ,
ಎಲ್ಲರೊಳಗೊಂದಾಗು ಮಂಕುತಿಮ್ಮ ||
ಪ್ರೀತಿ ಪೂರ್ವಕವಾಗಿ,
The complex mind...
No comments:
Post a Comment