D-Notification ಎಂಬ ಪೆಡಂಭೂತದ ಚಕ್ರವ್ಯೂಹದ ಯೋಚನಾಲಹರಿಯಿಂದ ಹೊರಬರಲೇಬೇಕೆಂಬ ಛಲದಿಂದ, ಸುಪುತ್ರ ಉದ್ದವನ ಜೊತೆಗೆ "ಬಾಲ ಗಣೇಶ" ಮೂವಿ ನೋಡಲು ಕುಳಿತುಕೊಂಡೆ. Atleast ಇದರಿಂದ ಮನಸ್ಸಿಗೇನೋ ಒಂತರಹದ ಖುಷಿಯಾದರೂ ಸಿಗುತ್ತೆ ಅನ್ನೋದು ನನ್ನ ಯೋಚನೆ ಆಗಿತ್ತಾದರೂ, Mind ಸ್ವಲ್ಪ Fresh ಆಗಲಿ ಅನ್ನೋ ಸ್ವಾರ್ಥ ಇತ್ತು. ಆದರೆ ಆಗಿದ್ದೇ ಬೇರೆ. Fresh ಆಗುತ್ತೆ ಅಂದುಕೊಂಡಿದ್ದು ಬರೀ ಕನಸಾಯಿತೇ ಹೊರತು, ಮಗನ Unanswerable questions (may be unimmaginable --ಕಲ್ಪನಾತೀತ) ನನ್ನ ತಲೆಯನ್ನ ಗಿರಿಮಿಟ್ಟು ಮಾಡಿಬಿಟ್ಟವು. ನಾವೇ ದೊಡ್ಡ ಜಾಣರೆಂದು ಕೊಚ್ಚಿಕೊಳ್ಳುವ ನಮಗೆ, ನಮ್ಮ Next generationನ ತಾರ್ಕಿಕತೆ, ವಿಚಾರಶಕ್ತಿ ನಮಗಿಂತಾ ಸಾವಿರ ಪಟ್ಟು ಮುಂದಿದೆ ಅನ್ನೋ ಸತ್ಯ ತಿಳಿಬೇಕಾದರೆ, ಮಕ್ಕಳಾಗಿ ಮಕ್ಕಳ ಜೊತೆ ಸಮಯ ಕಳೀರಿ, ಅಷ್ಟೇ ಅಲ್ಲಾ ಅದಕ್ಕಾಗಿ ಸಂತೋಷಪಡಿ. ಆದರೆ ಒಂದು ಮಾತು- ಅಪ್ಪಿ ತಪ್ಪಿನೂ ಅವರ immaginationಗೆ ಢಾಂಬಿಕ ರೂಪಕೊಟ್ಟು ಕಟ್ಟಳೆ ಹಾಕಬೇಡಿ.
ಅದೇ, ಸಾಯಂಕಾಲ ಉಳ್ಳಾಗಡ್ಡಿ ಭಜಿ ತಿನ್ನುತ್ತಾ , ಚಹಾ ಸವಿಯುತ್ತಾ, ಮಗನ ಜೊತೆಗೆ ಕುಳಿತೆ. ಗಣೇಶನ ಹುಟ್ಟಿನ ಬಗ್ಗೆ ಕಥೆ ಆರಂಭವಾಗಿತ್ತು. I explained him how parvathi made a idol and what all happend then, how he got elephant's face etc.,. I guess he was too facinated by that story and he asked me one simple question which I had no answer. ಅಪ್ಪನಾಗಿ ಶಿವಾ ತನ್ನ ಪಾಪುನ ತಲೇನೇ ಯಾಕೆ ಕತ್ತರಿಸಿದಾ ? ಅವನಿಗೆ ಗಣಪತಿಯಮೇಲೆ ಪ್ರೀತಿ ಇರಲಿಲ್ವಾ ? ಅದಕ್ಕೆ ನನ್ನ ಉತ್ತರ.. ಶಿವನಿಗೆ ಗಣಪತಿ ಯಾರು ಅಂತಾ ಗೊತ್ತಿರಲಿಲ್ಲಾ ಅದಕ್ಕೇ ಹಾಗೆ ಮಾಡಿದ. Suddenly next question..how come..he is God right, he should be knowing, ಅಲ್ಲದೇ ಗಣಪತಿ ಪಾಪು ಇದ್ದಾ, ಶಿವನಿಗೆ ಅಷ್ಟುಗೊತ್ತಾಗಲಿಲ್ವಾ? ಪಾಪುಗಳಿಗೆ ಹೊಡಿದರೆ, Policeನವರು ಹಿಡಕೊಂಡು ಹೋಗತಾರಂತ ? ಅಯ್ಯೋ ಅಯ್ಯೋ ಏನು ಉತ್ತರಾ ಕೊಡೋದು. He did not finish there.. ಆನೆಯ ತಲಿ ಯಾಕೆ ಕತ್ತರಿಸಿದರು , ಅನೆಯ ಪಾಪುಗಳಿಗೆ ಯಾರು ಹಾಲು ಕುಡಿಸ್ತಾರ, ಅವು ಎಲ್ಲಿ ಹೋಗಬೇಕು ? ಅದಕ್ಕ ನಾನು ದೊಡ್ಡವನಾದ ಮೇಲೆ, ಬಾಣಾ ತೊಗೊಂಡು ಶಿವನ ತ್ರಿಶೂಲಕ್ಕ ಹೊಡಿತಿನಿ. I got angry, I shouted stop it for now. I am still thinking on what to answer him... don't know these are beyond my immagination.
So now I am afraid to sit with him and see or explain him about Mahabharatha/Ramayana etc., We don't know what is the truth and we never had a question on the facinated things of thoes epics. ಯಾರಿಗೆ ಗೊತ್ತು ಈ ಉದ್ಧವನ ಪ್ರಶ್ನೆಗಳಿಗೆ ಉತ್ತರಿಸಲು ಆ ಮಾಧವನೇ ಮತ್ತೊಮ್ಮೆ ಬರಬೇಕೇನೊ? ನಿಜ if we start thinking in a different angle, we can get so many thoughts about our own life, culture which can not be answered. For example, ದ್ರೌಪದಿಯ ಸೀರೆ ಹೇಗೆ ಬೆಳಿತಾ ಹೋಯಿತು? ಇದಕ್ಕೊಂದು ತಾರ್ಕಿಕ ಉತ್ತರ ಕೊಟ್ಟಿದ್ದಾರೆ ಮೊನ್ನೆ ಒಬ್ಬರು.. ಅದು Hipnotisation ನ ಪ್ರಭಾವವಂತೆ. How our new magicians, Bridges, Buildings ನ ಮಾಯಾ ಮಾಡತಾರಲ್ಲಾ, ಅದೇ ರೀತಿ ಅಲ್ಲಿ ಆಗಿದ್ದು. ಇನ್ನೊಂದು Interesting ವಿಚಾರ ಅಂದರೆ, ಆ hipnotise ನ ಪ್ರಭಾವ ಎಲ್ಲಾರ ಮೇಲು ಆಗೋಲ್ವಂತೆ, ಅದಕ್ಕೇ ಭೀಷ್ಮ, ದ್ರೋಣ, ಸುಯೋಧನರು ಮಾತ್ರ ಕಣ್ಣು ಮುಚ್ಚಿ ತಲೆಕೆಳಗೆ ಹಾಕಿರೋದಂತೆ.
ಅದರಂತೆ ಈ ರಾಜಕಾರಣಿಗಳ Cunningness ಕೂಡ ಕಲ್ಪನಾತೀತವಾದದ್ದು. ಯಾರು ಯಾವ ರೆಸಾರ್ಟನಲ್ಲಿ, ಯಾರ ಜೊತೆ ,ಯಾರನ್ನ ಮುಗಿಸಲು ಹೊಂಚು ಹಾಕುತ್ತಿದ್ದಾರೋ, ಖಾಲಿ ಜಾಗೆಯನ್ನು ಎಷ್ಟು ಜನ ಹುಡುಕುತ್ತಿದ್ದಾರೋ, ಯಾರ ಮನೆಗೆ ಎಷ್ಟು ಸೂಟಕೇಸುಗಳು ರವಾನೆಯಾಗುತ್ತಿವೆಯೋ? ಆಣೆ, ಪ್ರಮಾಣ, ಭಾಷಣಗಳಿಂದ ಎಷ್ಟು ಜನರು hipnotise ಮಾಡತಿದ್ದಾರೋ ? ಇದಕ್ಕೆಲ್ಲಾ ಉತ್ತರ ಎಂದು. ಇದನ್ನು ಬಗೆಹರಿಸಲು ಯಾವ ಮಾಧನಿಗೂ ಸಾಧ್ಯವಿಲ್ಲಾ. ಇವು ಅವನ ಕಲ್ವನೆಗೂ ಮೀರಿದ Complex ಗಳು. ಇದಕ್ಕೆಂದು ಕೊನೆ, ಯಾರಾದರೂ ಬಲ್ಲಿರಾ?
ಕೊನೆಯ ಹನಿ :
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು
ಮೇಟಿ ವಿದ್ಯೆಗೂ ಮೇಲಾಯಿತೆ ಈ ರಾಜಕಾರಣಿಗಳ ಲೂಟಿ ವಿದ್ಯೆ........
ಪ್ರೀತಿ ಪೂರ್ವಕವಾಗಿ,
The complex mind...
No comments:
Post a Comment