ನಿಮಗೆಲ್ಲಾ ಗೊತ್ತಿರಬೇಕು, ಕನ್ನಡದ ಅತ್ಯಂತ ಪ್ರತಿಭಾನ್ವಿತ ಸಂಪಾದಕರಲ್ಲಿ ಒಬ್ಬರಾದ ಶ್ರೀ ವಿಶ್ವೇಶ್ವರ ಭಟ್ಟರು ತಮ್ಮದೇ ಆದ website ಆರಂಭಿಸಿದ್ದಾರೆ. ತನ್ನ್ಮೂಲಕ ನಮ್ಮ ನಿಮ್ಮೆಲ್ಲರಿಗೂ ತಮ್ಮ ಬರಹದ ಸಿಹಿಯನ್ನು ಉಣಬಡಿಸುತ್ತಿದ್ದಾರೆ. ನನ್ನ ಪ್ರಕಾರ ಕನ್ನಡ ಕಂಡ ಅಪರೂಪದ, ನಿರ್ಭಯ ಸಂಪಾದಕರೆಂದರೆ ಮೂರೇ ಮೂರು ಜನ. ವಾರಪತ್ರಿಕೆಯ ವೈಕುಂಠರಾಜು, ಹಾಯ್ ಬೆಂಗಳೂರಿನ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ಟರು. ಆ ಮೊನಚಾದ yet ಮನಮುಟ್ಟುವಂತಹ ಸಂಪಾದಕೀಯಗಳಿಂದ, ಸಂಪಾದಕೀಯ ಅಂದರೆ ಮೂಗುಮುರಿಯುತ್ತಿದ್ದ ಜನರನ್ನು ಓದಲೆಕ್ಕೆ ಹಚ್ಚಿದ್ದಾರೆ. ಇಂತಹ ಭಟ್ಟರಿಗೊಂದು ಮನವಿ.
ಸರ್,
ತಮ್ಮ ಅನಿಸಿಕೆಗಳನ್ನು ಈಗ ಅಂತರ್ಜಾಲದ ಮೂಲಕ ಓದಲು, ಅನುಭವಿಸಲು ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನಾನು ಕನ್ನಡಪ್ರಭ online edition ದ ಓದುಗ. ಕಳೆದ ೨ ವರ್ಷಗಳಿಂದ ಇದನ್ನು ಓದುತ್ತಿದ್ದೇನೆ. ಆದರೆ, ಕೆಲವೊಂದು ಸಲ ಈ ಪತ್ರಿಕೆಯಲ್ಲಿ ಬರುವ ವಿಷಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ವಿನಾಕಾರಣ IT ಜನರ ಮೇಲೆ ಗೂಬೆ ಕೂಡಿಸುವದು ಹಾಗೂ ಸಂಕುಚಿತ ಮನೋಭಾವದಿಂದ ಬರೆದ ಕೆಲವು ಬರಹಗಳು.. like, commonwealth games ನಲ್ಲಿ ಕನ್ನಡದ ಡಿಂಡಿಮ ( with Ashwini's photo posing with National Flag ).
ನನ್ನ ಪ್ರಕಾರ ಇವತ್ತು ಕನ್ನಡ ಅನ್ನೋ ಒಂದು ಭಾಷೆ ಇದೆ ಎಂದು ಜಗತ್ತಿಗೆ ಗೊತ್ತಾಗತಿರೋದೇ ಈ IT ಜನರಿಂದ. ಬೆಂಗಳೂರ ಅಂದರೆ ತಮಿಳರ ನಾಡು ಎಂಬ ಮನೋಭಾವ ಇದ್ದ ಜಗತ್ತಿಗೆ, hello! ಬೆಂಗಳೂರು ಅಂದರೆ ಕನ್ನಡ ಅಂತ ಮನವರಿಕೆ ಮಾಡಿ ಕೊಟ್ಟಿರೋದೆ ಈ IT ಜನ. ಸುಮ್ಮನೆ ಯಾರೋ "ಅ" ಕಾರಕ್ಕೂ "ಹ" ಕಾರಕ್ಕೂ ವ್ಯತ್ಯಾಸ ಇಲ್ಲದವರು, ಕನ್ನಡವನ್ನು ತಮ್ಮ ಸ್ವಹಿತಕ್ಕಾಗಿ ಬಳಸಿಕೊಳ್ಳುವ ಜನರ ಮಾತಿಗೆ ಮಾನ್ಯ ಮಾಡಿ ನಮ್ಮಂತಹ ಕನ್ನಡಿಗರಿಗೆ ಬಯ್ಯುವದು ಯಾವ ನ್ಯಾಯಾ ಹೇಳಿ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಷ್ಟು ಜನ ರಾಜಕಾರಣಿಗಳು ಕನ್ನಡದ ಮೇಲಿನ ಅಭಿಮಾನದಿಂದ ಬಂದಿದ್ದರು ಹೇಳಿ. ಅಲ್ಲದೇ ನಾವು IT ಜನರು ಅಂತಾ ಬೋರ್ಡ್ ಹಾಕ್ಕೊಂಡು ಬರಬೇಕಿತ್ತಾ ? ಆ ಲೇಖನ ಬರೆದವರಿಗೆ ಹೋಗಿ ಸ್ವಪ್ನಾ book stall ನಲ್ಲಿ ಕೇಳಲು ಹೋಗಿ, ಯಾರು ಜಾಸ್ತಿ ಕನ್ನಡ ಪುಸ್ತಕಗಳನ್ನು ಖರೀದಿ ಮಾಡೋದು ಅಂತಾ? ಯಾವ ವಕೀಲ, ವೈದ್ಯ, ವರ್ತಕ ಕನ್ನಡಕ್ಕಾಗಿ ಏನು ಮಾಡುತ್ತಿದ್ದಾನೆ ? ಎಲ್ಲಾ ಬೂಟಾಟಿಕೆ. IT ಜನರು ಸುಮ್ಮನಿರುತಾರಂತ ಹೀಗೆ ತೆಗಳೋದು ನ್ಯಾಯಾನಾ? ನಾವು ಇವತ್ತಿಗೂ ನಮ್ಮ ಬಿಡುವಿನಲ್ಲಿ ಕನ್ನಡದ ಛಂದಸ್ಸು, ಅಲಂಕಾರಗಳನ್ನು ಅರ್ಥ ಮಾಡಿಕೊಳ್ಳಲು ಹಾತೊರಿತಿರುತ್ತೇವೆ. ಪಂಪನಿಂದ ಹಿಡಿದು ಇಂದಿನ ನಿಸಾರ ಸರ್ ವರೆಗೂ ನಾವು ಅವರ ಬರಹಗಳನ್ನು ಓದುತ್ತೇವೆ. ವಿದೇಶದಲ್ಲಿದ್ದರೂ ಮಕ್ಕಳಿಗೆ ಕನ್ನಡ ( ಸರಿಯಾಗಿ ) ಕಲಿಸಿಕೊಡುತ್ತೇವೆ.
ಕಾರಣ ದಯವಿಟ್ಟು ಪತ್ರಿಕೆಗಳಲ್ಲಿ IT ಜನರನ್ನು ತೆಗಳುವ ಮುನ್ನ ಇನ್ನೊಂದು ಸಲ ಯೋಚನೆ ಮಾಡಲು ನಿಮ್ಮ ಪತ್ರಿಕೆಯವರಿಗೆ ಹೇಳಿ ಅಂತ, ನಿಮ್ಮ ಸಂಪಾದಕತ್ವದಲ್ಲಿ ಪತ್ರಿಕೆ, ನಿಜ ಪತ್ರಿಕೋದ್ಯಮದ ಪರಿಚಯ ಮಾಡಿಕೊಡಲಿ ಅಂತಾ ಹಾರೈಸುತ್ತಿದ್ದೇನೆ.
ತಮ್ಮ,
ಉಲ್ಲಾಸ
http://mycomplexes.blogspot.com/
ಅಂದ ಹಾಗೆ ಭಟ್ಟರ website http://www.vbhat.in/
ಕೊನೆಯ ಹನಿ....
ಕನ್ನಡದ ಬಗ್ಗೆ ಅಭಿಮಾನ ಇರಬೇಕು, ಆದರೆ ದುರಭಿಮಾನ ಬೇಡ. ( ಬಿ.ಎಮ್.ಶ್ರೀ ಅವರ ಒಂದು ಮಾತು )
ಪ್ರೀತಿ ಪೂರ್ವಕವಾಗಿ,
The complex mind......
You are very right in saying we fight for Kannada. I back you...
ReplyDeleteReply from Visheshwar bhat ( gmail)
ReplyDelete2011/2/10 Vishweshwar Bhat
Dear Ullas,
Thank you very much for your mail.
I completely agree with you and I also support your viewpoints. Can you write an article on this? It will be very interesting.
My best
Vishweshwar Bhat
ಈಗಿನ್ನೂ ನಿಮ್ಮ ಲೇಖನ ಓದಿದೆ .ಸರಿಯಾಗಿ ಬರೆದಿದ್ದೀರಿ. ನಿಮ್ಮ ನೇರನುಡಿಗಳು ಬಹಳ ಇಷ್ಟವಾದವು.
ReplyDeleteThanks Shaanu... Howz shaanu's dairy going on?
ReplyDeleteIT bashing ಇನ್ನೂ ಮುಗಿದಿಲ್ವ !!!
ReplyDeletehttp://kadalateera.blogspot.com/2009/02/blog-post_21.html
http://kadalateera.blogspot.com/2009/02/blog-post_28.html
ಇದರ ಬಗ್ಗೆ ಬರೆದು ವರ್ಷಗಳೆ ಆಯ್ತು !