Tuesday, May 22, 2012

ಎತ್ತ ಸಾಗುತ್ತಿದೆ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಜ್ !!!!

   ಕೆಲ ದಿನಗಳ ಹಿಂದೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಜ್ ಗಳು ವಿಶ್ವೇಶ್ವರ ಭಟ್ ಅವರ ತೆಕ್ಕೆಯಲ್ಲಿ ಬಂದು ಬಿದ್ದಾಗ ತುಂಬಾ ಸಂತೋಷಪಟ್ಟವರಲ್ಲಿ ನಾನೂ ಒಬ್ಬವನು. ನಿಜವಾದ ಮತ್ತು ನಿರ್ಭೀತಿಯ ಸುದ್ದಿಗಳನ್ನು ಓದಬಹುದು, ನೋಡಬಹುದು ಎಂಬ ಉತ್ಸಾಹದಿಂದ ಜನ ಈ ಎರಡು ಮಾಧ್ಯಮಗಳಿಗೆ ಮುಗಿಬಿದ್ದರು. ಬೇರೆಯವರ ಪತ್ರಿಕೆಗಳಲ್ಲೇ ಓದುತ್ತಿದ್ದ ಜನ ಇವತ್ತು ಕೊಂಡು ಓದುತ್ತಿರುವದು ನಿಜಕ್ಕೂ ಒಂದು ಮಹತ್ತರ ಬದಲಾವಣೆ. ಇದಕ್ಕಾಗಿ ಕನ್ನಡಪ್ರಭವನ್ನು ಅಭಿನಂದಿಸಲೇ ಬೇಕು. ಆದರೇ........
   ಇತ್ತೀಚಿನ ದಿನಗಳಲ್ಲಿ ಈ ಎರಡೂ ಮಾಧ್ಯಮಗಳು ಗಿಮಿಕ್ ನ್ನು ಹಾಗೂ ತಿರುಚಿಬರೆಯುವದನ್ನೇ ಬಂಡವಾಳ ಮಾಡಿಕೊಂಡಿದ್ದಾವೇನೋ ಅನ್ನಿಸುತ್ತಿದೆ. ತಪ್ಪಾಯಿತು ತಿದ್ದಿಕೋತಿವಿ ಅನ್ನೋ column ಇದಕ್ಕೆ ತಕ್ಕುದಾದ ಉದಾಹರಣೆ. ತಿದ್ದಿಕೋತಿವಿ ಅಂತಾ ಹೇಳತಾ ಮತ್ತದೇ ತಪ್ಪನ್ನು ಮಾಡುತಿರುವದು especially in sports section ಇದಕ್ಕೊಂದು ಕೈಗನ್ನಡಿ. ಆದರೆ ಅದೆಲ್ಲಾ OK. ಪ್ರತಿ ಅಕ್ಷರವನ್ನು, ವಾಕ್ಯವನ್ನು ಕೂಲಂಕಷವಾಗಿ ಪರಿಶೀಲಿಸಲು ಸಾಧ್ಯವಿಲ್ಲಾ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.
    ಆದರೇ ಇತ್ತಿತ್ತಲಾಗಿ " ವಾಕ್ಯ/ಹೇಳಿಕೆ ತಿರಿಚುವದನ್ನೂ" ಈ ಎರಡೂ ಮಾಧ್ಯಮಗಳು ಕರತಲಾಮಲಕ ಮಾಡಿಕೊಂಡಿರುವಂತಿದೆ. ಅದಕ್ಕೆ ಉದಾಹರಣೆ, ಬಿ.ಜೆ.ಪಿ ಯ ಈಶ್ವರಪ್ಪ ನವರ ಹೇಳಿಕೆ. ಈಶ್ವರಪ್ಪ ಹೇಳಿದ್ದು -  ಯಡಿಯೂರಪ್ಪನವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೇ , ಆತ್ಮಹತ್ಯ ಮಾಡಿಕೊಳ್ಳುತ್ತಿದ್ದರು. ಅದರ ಹಿಂದಿನ ಅರ್ಥ ; ಯಡಿಯೂರಪ್ಪ ತುಂಬಾ ಧೈರ್ಯವಂತ ಮತ್ತು ಅವರು ಇದನ್ನೆಲ್ಲಾ ಸಮರ್ಥವಾಗಿ ಎದಿರಿಸುತ್ತಾರೆ ಎಂಬುದು.  ಬೇರೆ ಯಾರಾದರೂ ಇದ್ದಿದ್ದರೆ ಸತ್ತೇ ಹೋಗುತ್ತಿದ್ದರು, ನಾನಾಗಿದ್ದರೇ ಸುಸೈಡ್ ಮಾಡಕೋತಿದ್ದೆ ಅನ್ನೋದು ಒಂದು common sentense. ಇಂಥ ವಾಕ್ಯಗಳು ವ್ಯಕ್ತಿಯ ಧೈರ್ಯವನ್ನು ಒತ್ತಿಹೇಳಲು ಉಪಯೋಗಿಸುವ ವಿಶೇಷಣಗಳು. ಆದರೇ.. ಈ ಎರಡು ಮಾಧ್ಯಮದವರು ಅದನ್ನು ಬೇರೇ ರೀತಿಯಲ್ಲಿಯೇ ಬಿಂಬಿಸಿಬಿಟ್ಟರು. ಎಂಥಾ ವಿಪರ್ಯಾಸ !!!  ಅದೇನೋ ಹೇಳತಾರಲ್ಲಾ,  ಅಜ್ಮೇರ್ ಗಯಾ ಎಂಬುದು ಆಜ ಮರ್ ಗಯಾ ಎಂಬ ಜೋಕು ಇದಕ್ಕೆ ಸರಿಯಾಗಿ ಹೊಂದುತ್ತದೆ.
    ಇದೇ ರೀತಿ ಪೇಜಾವರರ ಹೇಳಿಕೆ.  ಅವರು ಹೇಳಿದ್ದು - ಮಾಂಸಾಹಾರ ಮಾಡುವರ ಜೋತೆಗೆ ಸಹ ಭೋಜನ ಸಲ್ಲಾ.  ಅಂದರೆ.. ಮಾಂಸಾಹಾರ ಸೇವಿಸುತ್ತಿರುವ ಸಮಯದಲ್ಲಿ ಅವರ ಜೊತೆ ಕುಳಿತುಕೊಂಡು ಊಟ ( ಸಸ್ಯಹಾರವನ್ನೇ) ಮಾಡುವದು ಸರಿಯಲ್ಲಾ. ಯಾಕೆಂದರೇ, we may get attracted to that kind of food.  ಉದಾಹರಣೆಗೆ, ಕುಡಿತದ ಚಟ. ಯಾರೂ ಮೊದಲಿಗೆ ಒಬ್ಬರೇ ಹೋಗಿ ಕುಡಿದಿರುವದಿಲ್ಲಾ, Friends, colleague ಜೊತೆಗೆ ಬಾರ್ ನಲ್ಲಿ ಕುಳಿತು ಮೊದಮೊದಲು soft dirnks ಕುಡಿಯುತ್ತಿರುವರು ಕೊನೆಗೆ Hard drinks ನತ್ತ ಆಕರ್ಷಣೆಯಾಗಿರುವದು, ಆಗುತ್ತಿರುವದು ಸರ್ವಸಮ್ಮತ ವಿಚಾರ. But ಆ ಹೇಳಿಕೆಯನ್ನೇ ಬೇರೆ ಅರ್ಥಬರುವ ಹಾಗೆ ಬಿಂಬಿಸಿರುವದು ಸರಿಯಲ್ಲಾ. ಪ್ರತಾಪಸಿಂಹರಂತೂ ಕೈತೊಳೆದುಕೊಂಡು ಪೇಜಾವರ ಹಿಂದೆ ಬಿದ್ದಂತಿದೆ.
    ಕೆಲವೊಂದು ಕಾರ್ಯಕ್ರಮಗಳಂತೂ, ಒಬ್ಬ ವ್ಯಕ್ತಿಯ, ಘಟನೆಯ ಹಿಂದೆ ಬಿದ್ದುರುವದಂತೂ ಎದ್ದು ಕಾಣುತ್ತದೆ. ಉದಾಹರಣೆಗೆ, ಭೀಮಾತೀರದ ಮೂಲಕ ರವಿ ಬೆಳೆಗೆರೆಯ ಹಿಂದೆ, ಪೇಜಾವರ ಹಿಂದೆ ಇತ್ತ್ಯಾದಿ. ಆ ಮೆಗಾಫೈಟನ ಉದ್ದೇಶವಾದರೂ ಏನು ?  Prime time ಕಾರ್ಯಕ್ರಮಗಳು TV9ಗೆ compitationಗಾಗಿ ಅಂತಾ ಯಾರಾದರೂ ಹೇಳಬಹುದು. ಎಲ್ಲಾ TRP ಮಹಿಮೆ.
   So, ಈ ಎಲ್ಲಾ poinit ಗಳನ್ನು ನೋಡಿ ನನ್ನನ್ನೂ BJP ಕಾರ್ಯಕರ್ತ, ಕರ್ಮಠ ಬ್ರಾಹ್ಮಣಾ ಅಂತಾ ಹೇಳದಿರಲೆಂದು ವಿನಂತಿ. ಕೇವಲ ಓದುಗ ಬ್ಯಾಂಕ್ ಮಾಡಿದರೆ ಸಾಲದು, ನಿಜ ಮತ್ತು ನೈಜ ಸುದ್ದಿಗಳನ್ನು ತಲುಪಿಸುವಂತಾಗ ಬೇಕು.

with love,,,

the complex mind

No comments:

Post a Comment