Tuesday, May 22, 2012

ಎತ್ತ ಸಾಗುತ್ತಿದೆ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಜ್ !!!!

   ಕೆಲ ದಿನಗಳ ಹಿಂದೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಜ್ ಗಳು ವಿಶ್ವೇಶ್ವರ ಭಟ್ ಅವರ ತೆಕ್ಕೆಯಲ್ಲಿ ಬಂದು ಬಿದ್ದಾಗ ತುಂಬಾ ಸಂತೋಷಪಟ್ಟವರಲ್ಲಿ ನಾನೂ ಒಬ್ಬವನು. ನಿಜವಾದ ಮತ್ತು ನಿರ್ಭೀತಿಯ ಸುದ್ದಿಗಳನ್ನು ಓದಬಹುದು, ನೋಡಬಹುದು ಎಂಬ ಉತ್ಸಾಹದಿಂದ ಜನ ಈ ಎರಡು ಮಾಧ್ಯಮಗಳಿಗೆ ಮುಗಿಬಿದ್ದರು. ಬೇರೆಯವರ ಪತ್ರಿಕೆಗಳಲ್ಲೇ ಓದುತ್ತಿದ್ದ ಜನ ಇವತ್ತು ಕೊಂಡು ಓದುತ್ತಿರುವದು ನಿಜಕ್ಕೂ ಒಂದು ಮಹತ್ತರ ಬದಲಾವಣೆ. ಇದಕ್ಕಾಗಿ ಕನ್ನಡಪ್ರಭವನ್ನು ಅಭಿನಂದಿಸಲೇ ಬೇಕು. ಆದರೇ........
   ಇತ್ತೀಚಿನ ದಿನಗಳಲ್ಲಿ ಈ ಎರಡೂ ಮಾಧ್ಯಮಗಳು ಗಿಮಿಕ್ ನ್ನು ಹಾಗೂ ತಿರುಚಿಬರೆಯುವದನ್ನೇ ಬಂಡವಾಳ ಮಾಡಿಕೊಂಡಿದ್ದಾವೇನೋ ಅನ್ನಿಸುತ್ತಿದೆ. ತಪ್ಪಾಯಿತು ತಿದ್ದಿಕೋತಿವಿ ಅನ್ನೋ column ಇದಕ್ಕೆ ತಕ್ಕುದಾದ ಉದಾಹರಣೆ. ತಿದ್ದಿಕೋತಿವಿ ಅಂತಾ ಹೇಳತಾ ಮತ್ತದೇ ತಪ್ಪನ್ನು ಮಾಡುತಿರುವದು especially in sports section ಇದಕ್ಕೊಂದು ಕೈಗನ್ನಡಿ. ಆದರೆ ಅದೆಲ್ಲಾ OK. ಪ್ರತಿ ಅಕ್ಷರವನ್ನು, ವಾಕ್ಯವನ್ನು ಕೂಲಂಕಷವಾಗಿ ಪರಿಶೀಲಿಸಲು ಸಾಧ್ಯವಿಲ್ಲಾ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.
    ಆದರೇ ಇತ್ತಿತ್ತಲಾಗಿ " ವಾಕ್ಯ/ಹೇಳಿಕೆ ತಿರಿಚುವದನ್ನೂ" ಈ ಎರಡೂ ಮಾಧ್ಯಮಗಳು ಕರತಲಾಮಲಕ ಮಾಡಿಕೊಂಡಿರುವಂತಿದೆ. ಅದಕ್ಕೆ ಉದಾಹರಣೆ, ಬಿ.ಜೆ.ಪಿ ಯ ಈಶ್ವರಪ್ಪ ನವರ ಹೇಳಿಕೆ. ಈಶ್ವರಪ್ಪ ಹೇಳಿದ್ದು -  ಯಡಿಯೂರಪ್ಪನವರ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೇ , ಆತ್ಮಹತ್ಯ ಮಾಡಿಕೊಳ್ಳುತ್ತಿದ್ದರು. ಅದರ ಹಿಂದಿನ ಅರ್ಥ ; ಯಡಿಯೂರಪ್ಪ ತುಂಬಾ ಧೈರ್ಯವಂತ ಮತ್ತು ಅವರು ಇದನ್ನೆಲ್ಲಾ ಸಮರ್ಥವಾಗಿ ಎದಿರಿಸುತ್ತಾರೆ ಎಂಬುದು.  ಬೇರೆ ಯಾರಾದರೂ ಇದ್ದಿದ್ದರೆ ಸತ್ತೇ ಹೋಗುತ್ತಿದ್ದರು, ನಾನಾಗಿದ್ದರೇ ಸುಸೈಡ್ ಮಾಡಕೋತಿದ್ದೆ ಅನ್ನೋದು ಒಂದು common sentense. ಇಂಥ ವಾಕ್ಯಗಳು ವ್ಯಕ್ತಿಯ ಧೈರ್ಯವನ್ನು ಒತ್ತಿಹೇಳಲು ಉಪಯೋಗಿಸುವ ವಿಶೇಷಣಗಳು. ಆದರೇ.. ಈ ಎರಡು ಮಾಧ್ಯಮದವರು ಅದನ್ನು ಬೇರೇ ರೀತಿಯಲ್ಲಿಯೇ ಬಿಂಬಿಸಿಬಿಟ್ಟರು. ಎಂಥಾ ವಿಪರ್ಯಾಸ !!!  ಅದೇನೋ ಹೇಳತಾರಲ್ಲಾ,  ಅಜ್ಮೇರ್ ಗಯಾ ಎಂಬುದು ಆಜ ಮರ್ ಗಯಾ ಎಂಬ ಜೋಕು ಇದಕ್ಕೆ ಸರಿಯಾಗಿ ಹೊಂದುತ್ತದೆ.
    ಇದೇ ರೀತಿ ಪೇಜಾವರರ ಹೇಳಿಕೆ.  ಅವರು ಹೇಳಿದ್ದು - ಮಾಂಸಾಹಾರ ಮಾಡುವರ ಜೋತೆಗೆ ಸಹ ಭೋಜನ ಸಲ್ಲಾ.  ಅಂದರೆ.. ಮಾಂಸಾಹಾರ ಸೇವಿಸುತ್ತಿರುವ ಸಮಯದಲ್ಲಿ ಅವರ ಜೊತೆ ಕುಳಿತುಕೊಂಡು ಊಟ ( ಸಸ್ಯಹಾರವನ್ನೇ) ಮಾಡುವದು ಸರಿಯಲ್ಲಾ. ಯಾಕೆಂದರೇ, we may get attracted to that kind of food.  ಉದಾಹರಣೆಗೆ, ಕುಡಿತದ ಚಟ. ಯಾರೂ ಮೊದಲಿಗೆ ಒಬ್ಬರೇ ಹೋಗಿ ಕುಡಿದಿರುವದಿಲ್ಲಾ, Friends, colleague ಜೊತೆಗೆ ಬಾರ್ ನಲ್ಲಿ ಕುಳಿತು ಮೊದಮೊದಲು soft dirnks ಕುಡಿಯುತ್ತಿರುವರು ಕೊನೆಗೆ Hard drinks ನತ್ತ ಆಕರ್ಷಣೆಯಾಗಿರುವದು, ಆಗುತ್ತಿರುವದು ಸರ್ವಸಮ್ಮತ ವಿಚಾರ. But ಆ ಹೇಳಿಕೆಯನ್ನೇ ಬೇರೆ ಅರ್ಥಬರುವ ಹಾಗೆ ಬಿಂಬಿಸಿರುವದು ಸರಿಯಲ್ಲಾ. ಪ್ರತಾಪಸಿಂಹರಂತೂ ಕೈತೊಳೆದುಕೊಂಡು ಪೇಜಾವರ ಹಿಂದೆ ಬಿದ್ದಂತಿದೆ.
    ಕೆಲವೊಂದು ಕಾರ್ಯಕ್ರಮಗಳಂತೂ, ಒಬ್ಬ ವ್ಯಕ್ತಿಯ, ಘಟನೆಯ ಹಿಂದೆ ಬಿದ್ದುರುವದಂತೂ ಎದ್ದು ಕಾಣುತ್ತದೆ. ಉದಾಹರಣೆಗೆ, ಭೀಮಾತೀರದ ಮೂಲಕ ರವಿ ಬೆಳೆಗೆರೆಯ ಹಿಂದೆ, ಪೇಜಾವರ ಹಿಂದೆ ಇತ್ತ್ಯಾದಿ. ಆ ಮೆಗಾಫೈಟನ ಉದ್ದೇಶವಾದರೂ ಏನು ?  Prime time ಕಾರ್ಯಕ್ರಮಗಳು TV9ಗೆ compitationಗಾಗಿ ಅಂತಾ ಯಾರಾದರೂ ಹೇಳಬಹುದು. ಎಲ್ಲಾ TRP ಮಹಿಮೆ.
   So, ಈ ಎಲ್ಲಾ poinit ಗಳನ್ನು ನೋಡಿ ನನ್ನನ್ನೂ BJP ಕಾರ್ಯಕರ್ತ, ಕರ್ಮಠ ಬ್ರಾಹ್ಮಣಾ ಅಂತಾ ಹೇಳದಿರಲೆಂದು ವಿನಂತಿ. ಕೇವಲ ಓದುಗ ಬ್ಯಾಂಕ್ ಮಾಡಿದರೆ ಸಾಲದು, ನಿಜ ಮತ್ತು ನೈಜ ಸುದ್ದಿಗಳನ್ನು ತಲುಪಿಸುವಂತಾಗ ಬೇಕು.

with love,,,

the complex mind

Tuesday, February 8, 2011

ಶ್ರೀ ವಿಶ್ವೇಶ್ವರ ಭಟ್ಟ...

ನಿಮಗೆಲ್ಲಾ ಗೊತ್ತಿರಬೇಕು,  ಕನ್ನಡದ ಅತ್ಯಂತ ಪ್ರತಿಭಾನ್ವಿತ ಸಂಪಾದಕರಲ್ಲಿ ಒಬ್ಬರಾದ ಶ್ರೀ ವಿಶ್ವೇಶ್ವರ ಭಟ್ಟರು ತಮ್ಮದೇ ಆದ website ಆರಂಭಿಸಿದ್ದಾರೆ. ತನ್ನ್ಮೂಲಕ ನಮ್ಮ ನಿಮ್ಮೆಲ್ಲರಿಗೂ ತಮ್ಮ ಬರಹದ ಸಿಹಿಯನ್ನು ಉಣಬಡಿಸುತ್ತಿದ್ದಾರೆ. ನನ್ನ ಪ್ರಕಾರ ಕನ್ನಡ ಕಂಡ ಅಪರೂಪದ, ನಿರ್ಭಯ ಸಂಪಾದಕರೆಂದರೆ ಮೂರೇ ಮೂರು ಜನ. ವಾರಪತ್ರಿಕೆಯ ವೈಕುಂಠರಾಜು, ಹಾಯ್ ಬೆಂಗಳೂರಿನ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ಟರು.  ಆ ಮೊನಚಾದ yet ಮನಮುಟ್ಟುವಂತಹ ಸಂಪಾದಕೀಯಗಳಿಂದ, ಸಂಪಾದಕೀಯ ಅಂದರೆ ಮೂಗುಮುರಿಯುತ್ತಿದ್ದ ಜನರನ್ನು ಓದಲೆಕ್ಕೆ ಹಚ್ಚಿದ್ದಾರೆ.  ಇಂತಹ ಭಟ್ಟರಿಗೊಂದು ಮನವಿ. 
ಸರ್,
  ತಮ್ಮ ಅನಿಸಿಕೆಗಳನ್ನು ಈಗ ಅಂತರ್ಜಾಲದ ಮೂಲಕ ಓದಲು, ಅನುಭವಿಸಲು ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನಾನು ಕನ್ನಡಪ್ರಭ online edition ದ ಓದುಗ. ಕಳೆದ ೨ ವರ್ಷಗಳಿಂದ ಇದನ್ನು ಓದುತ್ತಿದ್ದೇನೆ. ಆದರೆ, ಕೆಲವೊಂದು ಸಲ ಈ ಪತ್ರಿಕೆಯಲ್ಲಿ ಬರುವ ವಿಷಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ವಿನಾಕಾರಣ  IT ಜನರ ಮೇಲೆ ಗೂಬೆ ಕೂಡಿಸುವದು ಹಾಗೂ ಸಂಕುಚಿತ ಮನೋಭಾವದಿಂದ ಬರೆದ ಕೆಲವು ಬರಹಗಳು.. like, commonwealth games ನಲ್ಲಿ ಕನ್ನಡದ ಡಿಂಡಿಮ ( with Ashwini's photo posing with National Flag ).
   ನನ್ನ ಪ್ರಕಾರ ಇವತ್ತು ಕನ್ನಡ ಅನ್ನೋ ಒಂದು ಭಾಷೆ ಇದೆ ಎಂದು ಜಗತ್ತಿಗೆ ಗೊತ್ತಾಗತಿರೋದೇ ಈ IT ಜನರಿಂದ. ಬೆಂಗಳೂರ ಅಂದರೆ ತಮಿಳರ ನಾಡು ಎಂಬ ಮನೋಭಾವ ಇದ್ದ ಜಗತ್ತಿಗೆ, hello! ಬೆಂಗಳೂರು ಅಂದರೆ ಕನ್ನಡ ಅಂತ ಮನವರಿಕೆ ಮಾಡಿ ಕೊಟ್ಟಿರೋದೆ ಈ IT ಜನ. ಸುಮ್ಮನೆ ಯಾರೋ "ಅ" ಕಾರಕ್ಕೂ "ಹ" ಕಾರಕ್ಕೂ ವ್ಯತ್ಯಾಸ ಇಲ್ಲದವರು, ಕನ್ನಡವನ್ನು ತಮ್ಮ ಸ್ವಹಿತಕ್ಕಾಗಿ ಬಳಸಿಕೊಳ್ಳುವ ಜನರ ಮಾತಿಗೆ ಮಾನ್ಯ ಮಾಡಿ ನಮ್ಮಂತಹ ಕನ್ನಡಿಗರಿಗೆ ಬಯ್ಯುವದು ಯಾವ ನ್ಯಾಯಾ ಹೇಳಿ.  ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಷ್ಟು ಜನ ರಾಜಕಾರಣಿಗಳು ಕನ್ನಡದ ಮೇಲಿನ ಅಭಿಮಾನದಿಂದ ಬಂದಿದ್ದರು ಹೇಳಿ. ಅಲ್ಲದೇ ನಾವು IT ಜನರು ಅಂತಾ ಬೋರ್ಡ್ ಹಾಕ್ಕೊಂಡು ಬರಬೇಕಿತ್ತಾ ? ಆ ಲೇಖನ ಬರೆದವರಿಗೆ ಹೋಗಿ ಸ್ವಪ್ನಾ book stall ನಲ್ಲಿ ಕೇಳಲು ಹೋಗಿ,  ಯಾರು ಜಾಸ್ತಿ ಕನ್ನಡ ಪುಸ್ತಕಗಳನ್ನು ಖರೀದಿ ಮಾಡೋದು ಅಂತಾ?  ಯಾವ ವಕೀಲ, ವೈದ್ಯ, ವರ್ತಕ ಕನ್ನಡಕ್ಕಾಗಿ ಏನು ಮಾಡುತ್ತಿದ್ದಾನೆ ? ಎಲ್ಲಾ ಬೂಟಾಟಿಕೆ. IT ಜನರು ಸುಮ್ಮನಿರುತಾರಂತ ಹೀಗೆ ತೆಗಳೋದು ನ್ಯಾಯಾನಾ?  ನಾವು ಇವತ್ತಿಗೂ ನಮ್ಮ ಬಿಡುವಿನಲ್ಲಿ ಕನ್ನಡದ ಛಂದಸ್ಸು, ಅಲಂಕಾರಗಳನ್ನು ಅರ್ಥ ಮಾಡಿಕೊಳ್ಳಲು ಹಾತೊರಿತಿರುತ್ತೇವೆ. ಪಂಪನಿಂದ ಹಿಡಿದು ಇಂದಿನ ನಿಸಾರ ಸರ್ ವರೆಗೂ ನಾವು ಅವರ ಬರಹಗಳನ್ನು ಓದುತ್ತೇವೆ. ವಿದೇಶದಲ್ಲಿದ್ದರೂ ಮಕ್ಕಳಿಗೆ ಕನ್ನಡ ( ಸರಿಯಾಗಿ ) ಕಲಿಸಿಕೊಡುತ್ತೇವೆ.  
   
     ಕಾರಣ ದಯವಿಟ್ಟು ಪತ್ರಿಕೆಗಳಲ್ಲಿ IT ಜನರನ್ನು ತೆಗಳುವ ಮುನ್ನ ಇನ್ನೊಂದು ಸಲ ಯೋಚನೆ ಮಾಡಲು ನಿಮ್ಮ ಪತ್ರಿಕೆಯವರಿಗೆ ಹೇಳಿ ಅಂತ,  ನಿಮ್ಮ ಸಂಪಾದಕತ್ವದಲ್ಲಿ ಪತ್ರಿಕೆ, ನಿಜ ಪತ್ರಿಕೋದ್ಯಮದ ಪರಿಚಯ ಮಾಡಿಕೊಡಲಿ ಅಂತಾ ಹಾರೈಸುತ್ತಿದ್ದೇನೆ.
ತಮ್ಮ,
ಉಲ್ಲಾಸ
http://mycomplexes.blogspot.com/
   
 ಅಂದ ಹಾಗೆ ಭಟ್ಟರ website    http://www.vbhat.in/

ಕೊನೆಯ ಹನಿ....
ಕನ್ನಡದ ಬಗ್ಗೆ ಅಭಿಮಾನ ಇರಬೇಕು, ಆದರೆ ದುರಭಿಮಾನ ಬೇಡ.  ( ಬಿ.ಎಮ್.ಶ್ರೀ ಅವರ ಒಂದು ಮಾತು )

ಪ್ರೀತಿ ಪೂರ್ವಕವಾಗಿ,
The complex mind...... 

Thursday, January 6, 2011

Recharge ಮಾಡಿಕೊಳ್ಳುತ್ತಾ.....

ಸುಮ್ಮನೇ ಕೂಡ್ರೋ ಚಾಳಿ.....
           ಅವನ ಹೆಸರು ವೀರೇಂದ್ರ ಕತ್ತಿ, ಇಂಗ್ಲೀಷನ್ಯಾಗ ಆದದ್ದು ಕಟ್ಟಿ. ಇವನಿಗೆ ನಾವೆಲ್ಲಾ ಕರಿತಿದ್ದಿದ್ದು " ಕಟ್ಟ್ಯಾ" ಅಂತ. ಇವನೊಬ್ಬ Unimmaginable character ದವನು. Department ನ H.O.D ಕರೆದು, ಯಾಕಪ್ಪಾ X ಅನ್ನೋ Lecturer ಕ್ಲಾಸ ಅಟೆಂಡ ಆಗತಾ ಇಲ್ಲಾ ಅಂತ ಕೇಳಿದರ...  ಇಲ್ಲಾ ಸರ್, ಅವರು ಹೇಳಿದ್ದು ತಿಳಿಯಂಗಿಲ್ಲಾ, ಅಲ್ಲದ ಅವರು just ಕುರ್ಮಿ ಬುಕ್ ನಲ್ಲಿರೋದನ್ನ ರಿಪೀಟ ಮಾಡತಾರ. So no extra knowledge or no proper answers to our practicle doubts. ಅದಕ್ಕ ಅಟೆಂಡ ಆಗಲ್ಲಾ, ಅಂತ ನೇರವಾಗಿ ಹೇಳಿ, Practicale exams ನಲ್ಲಿ, Internal Assessments ನಲ್ಲಿ ಹೊಡೆತಾ ತಿಂದಂತಹ "ಚೀಜ್" attitude ನವನು. ಬೆಳಿಗ್ಗೆ ಹಲ್ಲು brush ಮಾಡೋಕು ಇವನಿಗೆ ಬೇಸರ. Exam ನಲ್ಲಿ,  Answer in two sentenses ಅಂತ ಇದ್ದ question ಗಳಿಗೆ , ದೇವರಾಣೆಯಾಗಿಯೂ 3rd sentense ಬರಿದಿಲ್ಲಾ. ಆದರ, ಬೇರೆಯವರಿಗಾಗಿ, ಅವರು ಪಾಸ ಆಗಬೇಕಂತ, ಬೇಕಾದಷ್ಟು ಕರಾಮತ್ತು, set-up ಮಾಡಿ, ತನ್ನ reputation ಹಾಳು  ಮಾಡಿಕೊಂಡತವ.  ಇಂತವನು College election ನಲ್ಲಿ ಸೋತ ಅಂತ ನಾವೆಲ್ಲಾ ತಲೆಕೆಡಿಸಿಗೊಂಡು, ಹಾಸ್ಟೆಲ್ ಮೂಲೆ ಸೇರಿದರ, ಇವನೇ oppositionನವರ ಜೊತೆ ಕೂತು ಸಿಗರೇಟ ಎಳಿತಿದ್ದ. ಅದೆಲ್ಲಾ ಇರಲಿ, college days ನಲ್ಲಿ ಇವನಂತ ಲೇಝಿ ಪರ್ಸನ್ ಇನ್ನೊಬ್ಬನಿಲ್ಲಾ ಅಂತ ನಾವೆಲ್ಲಾ ಅವನಿಗೆ ಕಾಡತಿದ್ದ್ವಿ - ಅವನೂ ಒಂತರಹ ಹಾಗೇ ಇದ್ದಾ ಅನ್ನಿ.
            ಕೊನೆಗೂ ಕಷ್ಟಪಟ್ಟು, ಏನೇನೋ ಕರಾಮತ್ತುಗಳನ್ನ ಮಾಡಿ engineering ಮುಗಿಸಿ, ನೌಕರಿ ಹುಡುಕಾಟದ ನೋವುಗಳನ್ನ ಅನುಭವಿಸಲಾರಂಭಿಸಿದ ದಿನಗಳವು, ಆದರೆ ಈ ಕಟ್ಟ್ಯಾ ಮಾತ್), ಸಿಕ್ಕಿದ ಕೆಲಸಗಳಲ್ಲೇ, ಅವುಗಳ ಲೆವೆಲ್, ಪಗಾರ ನೋಡದೇ, ಮುಂಜಾನೆಯಿಂದ ರಾತ್ರಿವರೆಗೂ busy ಆಗಿರುತ್ತಿದ್ದಾ. ಸ್ವಲ್ವೇ ದಿನಗಳಲ್ಲಿ ಪುಣೆಯಲ್ಲಿ ಒಂದು ಚೆನ್ನಾಗಿರೋ ಕೆಲಸಾನೂ ಗಿಟ್ಟಿಸಿದ. ಆದರೆ ನನ್ನಂತ ಕೆಲವು ಹುಡಗರು ನಮ್ಮ ಲೆವಲ್ಗೆ ತಕ್ಕಂತ ಕೆಲಸಾ ಹುಡುಕೋತ, system ಅನ್ನು ಜರಿಯುತ್ತಾ, canteen ನಲ್ಲಿ ಕಾಲಾಕಳೆಯೋದೆ ಕೆಲಸಾ ಮಾಡಕೊಂಡ್ಬಿಟ್ವಿ. ಆಗ ಈ ಕಟ್ಟ್ಯಾ ಹೇಳಿದ ಮಾತೇ ...  ಲೇ ಉಲ್ಲ್ಯಾ! ಮಗನೆ, ಏನಾದರೂ ಮಾಡಲೇ, ಖಾಲಿ ಕೂಡೋ ಚಾಳಿ ಭಾಳಾ ಕೆಟ್ಟದ್ದು, ಒಂದ್ವೇಳೆ ಖಾಲಿ ಕೂಡೋ ಚಾಳಿ ಬಿತ್ತಂದ್ರ ನೋಡು ಆಮೇಲೆ ಭಾರೀ danger.
           ಇತ್ತಿತ್ತಲಾಗಿ, ನನಗೆ ಹಂಗೆ ಅನಿಸುತ್ತಿದೆ.  ಯಾವುದೇ ಕೆಲಸದಲ್ಲೂ Interest ಬರತಾಯಿಲ್ಲಾ. ಕೇವಲ ಸುಮ್ಮನೇ ಕೂಡಬೇಕಂತ ಅನಿಸ್ತದ. office ನಲ್ಲಿ ಕೆಲಸ ಇದ್ದರೂ ಬೇಜಾರು, ಇಲ್ಲದಿದ್ದರೂ ಬೇಜಾರು. swimming, cricket ಯಾವದರಲ್ಲೂ ಆಸಕ್ತಿನ ಬರತಾಯಿಲ್ಲಾ.  ನನಗೇನಾದರೂ ಸುಮ್ಮನೇ ಕೂಡೋ ಚಾಳಿ ಬಿತ್ತಾ ?  No No , never, ಇದೆಲ್ಲಾ ಯಾವದೋ ಒಂದು unethical discussion ನಿಂದ ಆಗತಾ ಇರೋದು ಅನ್ನೋದಂತು ಸತ್ಯಾ.  ಈ discussion ಅನ್ನೋದಂತು ಒಂತರಹದ ವಿಚಿತ್ರವಾದ, ಕಲ್ಪನಾತೀತವಾದ event ಆಗಿರೋದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ನಮ್ಮ IT industry boss ಗಳ ಜೊತೆ ಮಾಡೋ ಮೀಟಿಂಗ್ಸ್, ಡಿಸ್ಕಶನ್ಸ ಗಳಂತೂ ಚಿತ್ರ, ವಿಚಿತ್ರವಾದ, pre-decided ವಿಷಯಗಳ, ಆಶಾರಹಿತವಾದ, culprit ಮನಸ್ಸುಗಳ, ವಿವೇಚನಾರಹಿತವಾದ, self-secured kind of ಆಗಿರುವದು ನಿಜಕ್ಕೂ ವಿಪರ್ಯಾಸ. Motivate ಮಾಡದಿದ್ದರೂ, De-motivate ಮಾತ್ರ ಮಾಡಬಾರದೆಂಬ ಸಾಮಾನ್ಯ ಧ್ಯೇಯವೂ ಇಂದಿನ so called discussions ಗಳಲ್ಲಿ ಕಾಣದಿರುವದು ಹಾಸ್ಯಾಸ್ಪದ. ರಾಜಕೀಯದ ದೊಂಬರಾಟ ಈ educated people ಗಳ ಕೆಲಸ, ಮನಸ್ಸು, ಭಾವನೆ ಹಾಗೂ decisionsಗಳಲ್ಲಿ ಹಾಸುಹೊಕ್ಕಾಗಿರುವದು ಬೇಸರದ ಸಂಗತಿ. ಜಾತಿ, ಭಾಷೆ, ಸ್ವಹಿತ ಪ್ರೇರಿತ ಜನರು ಇಂದಿನ IT industryಯ key positionsಗಳಲ್ಲಿ ಕುಳಿತಿರುವದು, ಮುಂದಿನ ದಿನಗಳಲ್ಲಿ IT industry, ಮುನಸಿಪಾಲ್ಟಿ ಲೆವಲ್ ಗೆ ಬರೋದಂತು ನಿಜ.
Buttering the boss ಅಥವಾ Yes boss culture ಬೆಳಿತಿರೋದು, ಬೆಳೆಸುತ್ತಿರೋದು, Question ಮಾಡಿದರೆ ,attitude ಸರಿ ಇಲ್ಲಾ ಅನ್ನೋದು ಇಂದಿನ IT industry ಯ ಭೂಷಣಗಳಾಗಿ ಬೀಡುಬಿಟ್ಟಿರುವದು ಮುಂದಿನ ದಿನಗಳಲ್ಲಿ ಈ ಉದ್ಯಮದ ಅವನಿತಿಗೆ ತುಪ್ಪಸುರಿತಿವೆ.
         ಹೋಗಲಿ ಬಿಡಿ, ಕಾಲಾಯ ತಸ್ಮ್ಯನಮಃ ! ನಾವೂ ಗಾಳಿಬಿಟ್ಟಾಗ ತೂರಿಕೊಳ್ಳೋಣ.  ಅದೇ, ಈ ಸುಮ್ಮನೇ ಕೂಡೋ ಚಾಳಿ ಅದ ಅಲ್ಲಾ ಅದು ನಿಜಕ್ಕೂ ತುಂಬಾ ಅಪಾಯಕಾರಿ. ಇದರಲ್ಲಿ ಎರಡು ಅರ್ಥ ಇವೆ.  ಮೊದಲನೆಯದು, ಯಾರಾದರೂ , boss ಸಹಾ ಆಗಿರಬಹುದು, ಅವರು ಏನಾದರು ತಪ್ಪು ನಿರ್ಧಾರ ತೆಗೆದುಕೊಂಡಾಗ, purposefully ಯಾರಿಗಾದರೂ ಅನ್ನ್ಯಾಯ ಮಾಡಿದಾಗ ಅಥವಾ ಯಾರಿಗಾದರೂ unethical way ನಲ್ಲಿ boost ಮಾಡಿದಾಗ, ನಮಗ್ಯಾಕೆ ಬೇಕು ಅಂತಾ ಸುಮ್ಮನಿರೋದು.  ಇವತ್ತು ನಾವು ಸುಮ್ಮನಿದ್ದರೆ , next queue ನಲ್ಲಿ ನಾವೇ ಯಾಕಿರಬಾರದು. ಬೇರೆಯವರಿಗಾದ ಅನ್ನ್ಯಾಯ ನಮಗೂ ಯಾಕಾಗಬಾರದು?  ಎರಡನೆಯದು, not interested in any thing. ಅಂದರೆ ಮೇಲೆ ಹೇಳಿದ ಹಾಗೆ , ಯಾವುದೇ ಕೆಲಸದಲ್ಲೂ ಆಸಕ್ತಿ ತೋರದಿರುವದು.  ನೀವೆಲ್ಲಾ ನೋಡಿರಬಹುದು. ನಮ್ಮ ಪಕ್ಕದ ಮನೆಯ ಹುಡುಗ/ಹುಡುಗಿ ಆಗಿರಬಹುದು ಅಥವಾ ನಮ್ಮ ಗೆಳೆಯ ಆಗಿರಬಹುದು. We know they are very very brilliant and have the capability to achieve anything. But alas! everything is waste. They are in a mental status that they love to sit idal doing nothing. ಇಂತಹ ಒಂದು mental status ಗೆ ಬಂದು ಬಿಟ್ಟರೇ ಮುಗಿತು. Life is waste. ಅದಕ್ಕೇ ನಮ್ಮ ಹಿರಿಯರು ಹೇಳಿರೋದು, ಉದ್ಯೋಗಂ ಪುರುಷ ಲಕ್ಷಣಂ. ಇದನ್ನೇ ನನಗೆ ಅ ಕಟ್ಟ್ಯಾ ಮನವರಿಕೆ ಮಾಡಿಕೊಟ್ಟಿದ್ದು. He gave me few examples and changed my mind set.
ಅದಕ್ಕೇ ಇತ್ತೀಚಿನ ದಿನಗಳ ನನ್ನ ಖಾಲಿ ತಲೆಯನ್ನ ಮತ್ತೆ ಚಾರ್ಜ ಮಾಡಕೊಳ್ಳೋಕೆ , ಅವನು ಕೊಟ್ಟ ಕೆಲ examples ಗಳನ್ನ ನೆನೆಸಿಗೊಂಡು ಈ ಬ್ಲಾಗ ಬರಿತಿರೋದು.

ಕೊನೆಯ ಹನಿ :
  ನನ್ನ ಹೈಸ್ಕೂಲಿನ ಕನ್ನಡದ ಸರ್ ಆದ ಹಿರೇಮಠರವರು ಹೇಳುತ್ತಿದ್ದ ಒಂದು ವಾಕ್ಯ.
" ಏನಾದರೂ ಅಗು ಮೊದಲು ಒಳ್ಳೆಯ ದುಡಿಮೆಗಾರನಾಗು, ಅಂದರೆ automatic ಆಗಿ ಮಾನವ ಆಗತೀಯ "
ಪ್ರೀತಿ ಪೂರ್ವಕವಾಗಿ,
The Complex mind...

Sunday, November 21, 2010

ನಾನು ನೀನಾಗಿ, ನೀನು ನಾನಾಗಿ

ಭಜಗೋವಿಂದಂ
      ನಿನ್ನೆ ಶನಿವಾರ, ಹಾಗೆ as a part of my weekly cleaning activity, was trying to clean , organize my bags, suitcases etc.., and found a old unlabelled CD and just with a thought I kept it aside so that I can check the content of that later. ನಿಮಗೂ ಆಗಿರಬೇಕು ಕೆಲವೊಂದು ವಸ್ತುಗಳು ಎಷ್ಟೇ ಹುಡುಕಿದರೂ ಬೇಕಾದಾಗ ಸಿಗೋದೇಯಿಲ್ಲಾ, but we get them at an unnoticable time and place and will make us to think a lot ಅಂದರೆ ನಮ್ಮ ಸ್ತುಪ್ತ ಮನಸ್ಸನ್ನು ಜಾಗ್ರತಗೊಳಿಸುತ್ತವೆ. ಮಲಗಿದ್ದ ನಮ್ಮನ್ನು ಬಡಿದೆಬ್ಬಿಸುತ್ತವೆ.
      Just as a dailly activity ನಿನ್ನೆನೂ ಕೂಡ ಸಾಯಂಕಾಲದ walkingಗೆ ಹೋಗತಿದ್ದೆ. Walking ಅಂತ ಹೇಳಿದರೂ ಅದು actually a drive in my Audi for around 10km, to fresh-up myself from Incidents, issues, meetings etc.., and make my mind empty ಯಾಕಂದರೆ ಖಾಲಿ ತಲೆಯಲ್ಲೇ Complex ಆಲೋಚನೆಗಳು ಬರೋದು. ಅಂದರೇ ಬ್ಲಾಗ ಬರೆಯೋಕೆ ಸರಕು ಸಿಗೋದು.  So ಹಾಗೆ ಕಾರ ಸ್ಟಾರ್ಟ್ ಮಾಡಿ, ಸಿಕ್ಕ ಆ ಹಳೆ CDn ಪ್ಲೇಯರಿಗೆ ತುರುಕಿದೆ. ಕೂಡಲೇ, ಅದೇನು ಅದ್ಭುತವೋ ಎಂಬಂತೆ, ಈ ಜಗತ್ತು ಕಂಡ one of the finest, famous singer ಸುಬ್ಬುಲಕ್ಷ್ಮಿ ಅವರ ಕಂಠಸಿರಿಯಿಂದ, ಜೀವದ ಸಾರವನ್ನೇ ಹೇಳುವ, ಆದಿ ಶಂಕರ ವಿರಚಿತ ಅದ್ಭುತ ಹಾಡು, infact I call it as ಶ್ಲೋಕ ಹೊರಬಂತು. ಭಜಗೋವಿಂದಂ,ಭಜಗೋವಿಂದಂ...ಗೋವಿಂದಂ ಭಜೇ ಮೂಢಮತೆ !! This is one of the best shlokas I ever heard. This is the shloka which tells you the importance of Bhakti towards God, Love towards others ಒಟ್ಟಿನಲ್ಲಿ ಜೀವದ ಸಾರ, ಮಹತ್ವ, ಜೀವಿಸಬೇಕಾದ ರೀತಿ, ನೀತಿಗಳ ಬಗ್ಗೆ ಮನಮುಟ್ಟುವಂತೆ ಉಪದೇಶಿಸುತ್ತದೆ.
      ನಾವೇನಾದರೂ ಅದರಲ್ಲಿ ಹೇಳಿದಂತೆ ನಡೆದರೆ, it can give us enormous amount of power to live with  "ಮನಃಶಾಂತಿ". ಸುಖಜೀವನದ ಪರಿಕಲ್ಪನೆ ಕೇವಲ ಕಲ್ವನೆಯಾಗದೇ, ನಾವೆಲ್ಲಾ ತುಂಬಿದ ಕೊಡಗಳಂತೆ ಜೀವನ ಮಾಡಬಹುದು. ಜಗತ್ತೆಲ್ಲಾ ಶಾಂತಿಯಿಂದ, ಭಾತ್ರತ್ವದ ಜೀವನ ನಡೆಸಬಹುದು, we may not need any "NATTO" force to bring peace in our lives. 
     The 25th shloka of Bhajagovindam impressed me a lot...
 शत्रौ मित्रे पुत्रे बन्धौ,
 मा कुरु यत्नं विग्रहसन्धौ।
 सर्वस्मिन्नपि पश्यात्मानं,
 सर्वत्रोत्सृज भेदाज्ञानम् ||
 ಇದರ ಅರ್ಥ :   ನಿನ್ನ ಮಿತ್ರ, ಮಕ್ಕಳು, ಬಂಧು, ತಾಯಿ, ತಂದೆಯವರ ಪ್ರೀತಿಗಳಿಸಲು ಹೋರಡಬೇಡ
                    ನಿನ್ನ ವೈರಿ, ದಾಯಾದಿಗಳ ಜೊತೆ ವೈರತ್ವಕ್ಕಾಗಿ, ಹೋರಾಟಕ್ಕಾಗಿ ಪ್ರಯತ್ನಿಸಬೇಡ,
                    ಬದಲಾಗಿ ನಿನ್ನನ್ನೇ ಅವರಲ್ಲಿ ಕಾಣು, ನಾನು, ನನ್ನದು, ಪರರದು ಎಂಬು ದ್ವಿಮುಖ ವಿಚಾರವನ್ನೇ ಬಿಡು.
                   
ಎಷ್ಟು ಅದ್ಭುತ ವಿಚಾರವಲ್ಲವೇ ? ನಾನೇ ನೀನು, ನೀನೇ ನಾನು ಎಂಬ ಸಂಗತಿ ನಿಜವಾದರೆsss, !!! ಅದನ್ನೇ ನಮ್ಮ ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೇಳಿದ್ದು... ಎಲ್ಲರೊಳಗೊಂದಾಗು ಮಂಕುತಿಮ್ಮ.  ಅಹ್ಂ ಬ್ರಹ್ಮಾಸ್ಮಿ!  ನಾನು ನೀನು ಎಂಬುದು ಒಂದಾದಾಗ, ದೇವರಿಗೂ ನಮಗೂ ಎಲ್ಲಿಯ ವ್ಯತ್ಯಾಸ. ನನ್ನಲ್ಲಿ ದೇವರಿರುವದು ನಿಜವಾದರೆ, ನಾನೇ ಕಾಣುತ್ತಿರುವ ಇನ್ನೊಬ್ಬನಲ್ಲೂ ದೇವರಿರುವದು ಅಷ್ಟೇ ಸತ್ಯ. ಅದ್ವೈತದ ಕಲ್ವನೆಯೂ ಇದೇ ತಾನೆ ? ಅಷ್ಟೇ ಅಲ್ಲಾ, ಭಕ್ತಿ ಪರಂಪರೆಯೂ ಹೇಳಿರುವದು ಇದೇ ಭಜಗೋವಿಂದಂನ ಸಾರ.
     ಹೋಗ್ಲಿಬಿಡಿ ದ್ವೈತ, ಅದ್ವೈತಗಳ ಬಗ್ಗೆ ಸಾಧ್ಯವಾದರೆ ಮುಂದಿನ ಬ್ಲಾಗನಲ್ಲಿ ಬರಿತೀನಿ. ಏಕೋ ಗೊತ್ತಿಲ್ಲ, ಭಜಗೋವಿಂದಂ ಕೇಳಿದಮೇಲೆ ಮನಸ್ಸು ಆಧ್ಯಾತ್ಮದತ್ತ( ಸನ್ಯಾಸತ್ವ ಎಂದು confuse ಆಗಬೇಡಿ ) ವಾಲುತ್ತಿದೆ. ಎಷ್ಟು ನಿಜಾ ಅಲ್ವಾ, ಎಲ್ಲರಲ್ಲೂ ತನ್ನನ್ನೇ ಕಂಡರೆ, ತನ್ನನ್ನು ತಾನು ಪ್ರೀತಿಸದಷ್ಟು ಬೇರೆಯವರನ್ನೂ ಪ್ರೀತಿಸಬಹುದಲ್ಲವೇ ? ಜಗವೆಲ್ಲಾ ಒಂದು ಕುಟುಂಬವಾಗಿ " ವಸುಧೈವ ಕುಟುಂಬಕಂ" ಅನ್ನೋ ಹಾಗೆ ಎಲ್ಲರೂ ಸ್ನೇಹಜೀವಿಗಳಾಗಿ ಬಾಳಬಹುದಲ್ಲವೇ?. ಪರರಲ್ಲಿ ತನ್ನದೇ ಅಸ್ಥಿತ್ವ ಕಂಡಾಗ Difference of opinion ಅನ್ನೋದಕ್ಕೆ ನೆಲೆನೇ ಇರದಂತಾಗಬಹುದಲ್ಲವೇ?.
       ಇದನ್ನು ಓದಿದ ಮೇಲೆ ನೀವು ಕೇಳಬಹುದು... ಏನಪ್ಪಾ ಕನಸುಕಾಣುತ್ತಿದ್ದಿಯಾ ????  ಈ ಕನಸು ನನಸಾದರೆ...

ಕೊನೆಯ ಹನಿ:
ಡಿ.ವಿ.ಜಿ ಯವರ ಕಗ್ಗದ ಒಂದು ನುಡಿ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆವಿಧಿಯ ಸಿರಿಯೆ,
ಬೆಲ್ಲಸಕ್ಕರೆಯಾಗು ದೀನದುರ್ಬಲರಿಗೆ,
ಎಲ್ಲರೊಳಗೊಂದಾಗು ಮಂಕುತಿಮ್ಮ ||

ಪ್ರೀತಿ ಪೂರ್ವಕವಾಗಿ,
The complex mind...

Thursday, November 18, 2010

ಬಗೆ ಹರಿಯದ Complexcityಗಳು...

D-Notification ಎಂಬ ಪೆಡಂಭೂತದ ಚಕ್ರವ್ಯೂಹದ ಯೋಚನಾಲಹರಿಯಿಂದ ಹೊರಬರಲೇಬೇಕೆಂಬ ಛಲದಿಂದ, ಸುಪುತ್ರ ಉದ್ದವನ ಜೊತೆಗೆ "ಬಾಲ ಗಣೇಶ" ಮೂವಿ ನೋಡಲು ಕುಳಿತುಕೊಂಡೆ. Atleast ಇದರಿಂದ ಮನಸ್ಸಿಗೇನೋ ಒಂತರಹದ ಖುಷಿಯಾದರೂ ಸಿಗುತ್ತೆ ಅನ್ನೋದು ನನ್ನ ಯೋಚನೆ ಆಗಿತ್ತಾದರೂ, Mind ಸ್ವಲ್ಪ Fresh ಆಗಲಿ ಅನ್ನೋ ಸ್ವಾರ್ಥ ಇತ್ತು.  ಆದರೆ ಆಗಿದ್ದೇ ಬೇರೆ.  Fresh ಆಗುತ್ತೆ ಅಂದುಕೊಂಡಿದ್ದು ಬರೀ ಕನಸಾಯಿತೇ ಹೊರತು, ಮಗನ Unanswerable questions (may be unimmaginable --ಕಲ್ಪನಾತೀತ) ನನ್ನ ತಲೆಯನ್ನ ಗಿರಿಮಿಟ್ಟು ಮಾಡಿಬಿಟ್ಟವು.  ನಾವೇ ದೊಡ್ಡ ಜಾಣರೆಂದು ಕೊಚ್ಚಿಕೊಳ್ಳುವ ನಮಗೆ, ನಮ್ಮ Next generationನ ತಾರ್ಕಿಕತೆ, ವಿಚಾರಶಕ್ತಿ ನಮಗಿಂತಾ ಸಾವಿರ ಪಟ್ಟು ಮುಂದಿದೆ ಅನ್ನೋ ಸತ್ಯ ತಿಳಿಬೇಕಾದರೆ, ಮಕ್ಕಳಾಗಿ ಮಕ್ಕಳ ಜೊತೆ ಸಮಯ ಕಳೀರಿ, ಅಷ್ಟೇ ಅಲ್ಲಾ ಅದಕ್ಕಾಗಿ ಸಂತೋಷಪಡಿ. ಆದರೆ ಒಂದು ಮಾತು- ಅಪ್ಪಿ ತಪ್ಪಿನೂ ಅವರ immaginationಗೆ ಢಾಂಬಿಕ ರೂಪಕೊಟ್ಟು ಕಟ್ಟಳೆ ಹಾಕಬೇಡಿ.
      ಅದೇ, ಸಾಯಂಕಾಲ ಉಳ್ಳಾಗಡ್ಡಿ ಭಜಿ ತಿನ್ನುತ್ತಾ , ಚಹಾ ಸವಿಯುತ್ತಾ, ಮಗನ ಜೊತೆಗೆ ಕುಳಿತೆ. ಗಣೇಶನ ಹುಟ್ಟಿನ ಬಗ್ಗೆ ಕಥೆ ಆರಂಭವಾಗಿತ್ತು. I explained him how parvathi made a idol and what all happend then, how he got elephant's face etc.,.  I guess he was too facinated by that story and he asked me one simple question which I had no answer. ಅಪ್ಪನಾಗಿ ಶಿವಾ ತನ್ನ ಪಾಪುನ ತಲೇನೇ ಯಾಕೆ ಕತ್ತರಿಸಿದಾ ? ಅವನಿಗೆ ಗಣಪತಿಯಮೇಲೆ ಪ್ರೀತಿ ಇರಲಿಲ್ವಾ ?  ಅದಕ್ಕೆ ನನ್ನ ಉತ್ತರ.. ಶಿವನಿಗೆ ಗಣಪತಿ ಯಾರು ಅಂತಾ ಗೊತ್ತಿರಲಿಲ್ಲಾ ಅದಕ್ಕೇ ಹಾಗೆ ಮಾಡಿದ.  Suddenly next question..how come..he is God right, he should be knowing, ಅಲ್ಲದೇ ಗಣಪತಿ ಪಾಪು ಇದ್ದಾ, ಶಿವನಿಗೆ ಅಷ್ಟುಗೊತ್ತಾಗಲಿಲ್ವಾ? ಪಾಪುಗಳಿಗೆ ಹೊಡಿದರೆ, Policeನವರು ಹಿಡಕೊಂಡು ಹೋಗತಾರಂತ ? ಅಯ್ಯೋ ಅಯ್ಯೋ ಏನು ಉತ್ತರಾ ಕೊಡೋದು. He did not finish there.. ಆನೆಯ ತಲಿ ಯಾಕೆ ಕತ್ತರಿಸಿದರು , ಅನೆಯ ಪಾಪುಗಳಿಗೆ ಯಾರು ಹಾಲು ಕುಡಿಸ್ತಾರ, ಅವು ಎಲ್ಲಿ ಹೋಗಬೇಕು ? ಅದಕ್ಕ ನಾನು ದೊಡ್ಡವನಾದ ಮೇಲೆ, ಬಾಣಾ ತೊಗೊಂಡು ಶಿವನ ತ್ರಿಶೂಲಕ್ಕ ಹೊಡಿತಿನಿ.  I got angry, I shouted stop it for now.  I am still thinking on what to answer him... don't know these are beyond my immagination.
    So now I am afraid to sit with him and see or explain him about Mahabharatha/Ramayana etc., We don't know what is the truth and we never had a question on the facinated things of thoes epics. ಯಾರಿಗೆ ಗೊತ್ತು ಈ ಉದ್ಧವನ ಪ್ರಶ್ನೆಗಳಿಗೆ ಉತ್ತರಿಸಲು ಆ ಮಾಧವನೇ ಮತ್ತೊಮ್ಮೆ ಬರಬೇಕೇನೊ? ನಿಜ if we start thinking in a different angle, we can get so many thoughts about our own life, culture which can not be answered. For example, ದ್ರೌಪದಿಯ ಸೀರೆ ಹೇಗೆ ಬೆಳಿತಾ ಹೋಯಿತು? ಇದಕ್ಕೊಂದು ತಾರ್ಕಿಕ ಉತ್ತರ ಕೊಟ್ಟಿದ್ದಾರೆ ಮೊನ್ನೆ ಒಬ್ಬರು.. ಅದು Hipnotisation ನ ಪ್ರಭಾವವಂತೆ. How our new magicians, Bridges, Buildings ನ ಮಾಯಾ ಮಾಡತಾರಲ್ಲಾ, ಅದೇ ರೀತಿ ಅಲ್ಲಿ ಆಗಿದ್ದು. ಇನ್ನೊಂದು Interesting ವಿಚಾರ ಅಂದರೆ, ಆ hipnotise ನ ಪ್ರಭಾವ ಎಲ್ಲಾರ ಮೇಲು ಆಗೋಲ್ವಂತೆ, ಅದಕ್ಕೇ ಭೀಷ್ಮ, ದ್ರೋಣ, ಸುಯೋಧನರು ಮಾತ್ರ ಕಣ್ಣು ಮುಚ್ಚಿ ತಲೆಕೆಳಗೆ ಹಾಕಿರೋದಂತೆ.
 
     ಅದರಂತೆ ಈ ರಾಜಕಾರಣಿಗಳ Cunningness ಕೂಡ ಕಲ್ಪನಾತೀತವಾದದ್ದು. ಯಾರು ಯಾವ ರೆಸಾರ್ಟನಲ್ಲಿ, ಯಾರ ಜೊತೆ ,ಯಾರನ್ನ ಮುಗಿಸಲು ಹೊಂಚು ಹಾಕುತ್ತಿದ್ದಾರೋ,  ಖಾಲಿ ಜಾಗೆಯನ್ನು ಎಷ್ಟು ಜನ ಹುಡುಕುತ್ತಿದ್ದಾರೋ,  ಯಾರ ಮನೆಗೆ ಎಷ್ಟು ಸೂಟಕೇಸುಗಳು ರವಾನೆಯಾಗುತ್ತಿವೆಯೋ? ಆಣೆ, ಪ್ರಮಾಣ, ಭಾಷಣಗಳಿಂದ ಎಷ್ಟು ಜನರು hipnotise ಮಾಡತಿದ್ದಾರೋ ? ಇದಕ್ಕೆಲ್ಲಾ ಉತ್ತರ ಎಂದು. ಇದನ್ನು ಬಗೆಹರಿಸಲು ಯಾವ ಮಾಧನಿಗೂ ಸಾಧ್ಯವಿಲ್ಲಾ. ಇವು ಅವನ ಕಲ್ವನೆಗೂ ಮೀರಿದ Complex ಗಳು.  ಇದಕ್ಕೆಂದು ಕೊನೆ, ಯಾರಾದರೂ ಬಲ್ಲಿರಾ?

ಕೊನೆಯ ಹನಿ : 
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು
ಮೇಟಿ ವಿದ್ಯೆಗೂ ಮೇಲಾಯಿತೆ ಈ ರಾಜಕಾರಣಿಗಳ ಲೂಟಿ ವಿದ್ಯೆ........

ಪ್ರೀತಿ ಪೂರ್ವಕವಾಗಿ,
The complex mind...

Wednesday, November 17, 2010

ಕನ್ನಡದ ನೆಲಾ ಯಾರಪ್ಪನ ಮನೆಯ ಆಸ್ತಿ ???

ದುರಾಸೆಯ ಪ್ರತಿರೂಪಗಳು....  
  ಹೌದು ನಾನು ಹೇಳುತ್ತಿರುವದು ನಮ್ಮ ರಾಜಕಾರಣಿಗಳ ಬಗ್ಗೆ. ನನಗೆ ಗೊತ್ತು ಆ ಬಗ್ಗೆ ಕೇಳೋದಕ್ಕೂ ಹೇಳೋದಕ್ಕೂ ಅಸಹ್ಯ ಆಗುತ್ತೆ. ಆದರೆ ಇವತ್ತಿನ ನ್ಯೂಜ ಪೇಪರ್ ನೋಡಿದ ಮೇಲೆ ಯಾಕೋ ಮನಸ್ಸು ತಡಿಲಾರದೇ ಜಿಗುಪ್ಸೆಗೊಂಡಂತಾಗಿ, ಅದರಿಂದ ಹೊರಬರಲಿಕ್ಕಾಗಿ ಮನಸ್ಸಿನ ಆ ಎಲ್ಲಾ ಸಿಟ್ಟು, ಅಸಹನೆ, ಭಾವೋದ್ವೇಗಗಳನ್ನು ಅದುಮಿಡಲಾರದೇ, ಕೆಲಸದ ಒತ್ತಡದ ನಡುವೆಯೂ ಮನದ ತಣಿವಿಗಾಗಿ ಇವತ್ತು ಅನಿಸಿದ್ದನ್ನು ಗೀಚುತ್ತಿದ್ದೇನೆ. 
  ಕಳೆದ ಎಲೆಕ್ಷನ್ ನಲ್ಲಿ ಯಾಕದರೂ Vote ಹಾಕಿದೆನೋ ಅಂತಾ ನನ್ನ ಮೆಟ್ಟು ತೊಗೊಂಡು ನಾನೇ ಹೊಡಕೋಬೇಕು ಅನ್ನಿಸ್ತಿದೆ. ಏನೋ ವಂಶಾಡಳಿತಾ, ಅಪ್ಪ-ಮಕ್ಕಳ ದರಬಾರಿಂದಾ ನಮ್ಮ ನೆಲಾ ( ನೆಲಾ ಅಂದರೆ ಭೂಮಿ Land )ರಕ್ಷಣೆಯಾಗಲಿ ಅಂತ, ಗಟ್ಟಿ ಮನಸ್ಸು ಮಾಡಿ Vote ಹಾಕಿ ಏನೋ ದೊಡ್ಡ ತಪ್ಪು ಮಾಡಿದೆನಾ ಅನ್ನೋ ಅಪರಾಧಿ ಮನೋಭಾವ ಕಾಡಲಿಕ್ಕೆ ಶುರುಮಾಡಿದೆ. ಅಲ್ಲಾ, ಕೇವಲ ಒಂದು ನೂರು ದಿವಸದ ಆಡಳಿತದಾಗ ಸಾವಿರಾರು ಎಕ್ಕರೆ Landನಾ ಗುಳುಂ ಮಾಡಿದ್ದಾರಲ್ಲಾ ಇವರನ್ನ ಏನನ್ನಬೇಕು ? ಅಷ್ಟೆ ಅಲ್ಲಾ ತಾವು ಮಾಡಿದ್ದನ್ನ ಸಮರ್ಥಿಸಿಕೊಳ್ಳೋದಕ್ಕಾಗಿ  ನಂಜುಂಡೇಶ್ವರ, ಬಸವಣ್ಣರ ಮೇಲೆ ಪ್ರಮಾಣ ಬೇರೆ ಮಾಡಿ, ನಮ್ಮನ್ನ Emmotional ಬ್ಲ್ಯಾಕಮೇಲ್ ಮಾಡತಿದ್ದಾರಲ್ಲಾ, ಅಯ್ಯೋಹ್ ಕರ್‍ಮವೇ!!!!
   ಅಷ್ಟೇ ಅಲ್ಲಾ ಇದರ ಮೇಲೆ, ತಮ್ಮ ಮಕ್ಕಳಿಗೆ, ಸೊಸೆಯಂದಿರಿಗೆ D-notify ಮಾಡಿದ್ದು ಕಾನೂನಿನ ಚೌಕಟ್ಟಿನಲ್ಲೇ ಅಂತಾ Pose ಕೊಟ್ಟು ಪೂಸಿ ಹೊಡಿತಿದ್ದಾರಲ್ಲಾ, ಯಾಕೆ ನಮ್ಮ ಮಕ್ಕಳು Industrialist ಆಗಬಾರದಾ ಅಂತ ಕೇಳತಿದ್ದಾರಲ್ಲಾ ಹಾಗದರೆ, ಇವರ ಮಕ್ಕಳು ಹುಟ್ಟಾ Welding Gun ಕೈಯಲ್ಲಿ ಹಿಡಕೊಂಡು ಹುಟ್ಟಿದ್ದಾರಾ? ಹತ್ತು ಹಲವಾರು ವರ್ಷಗಳಿಂದ Land ಗಾಗಿ ಅರ್ಜಿ ಹಾಕ್ಕೊಂಡು ಜಾತಕ ಪಕ್ಷಿಯಂತೆ ಕಾಯತಿದ್ದಾರಲ್ಲಾ ಅವರೇನು ಮಾಡೋದು. ಇರೋ ಎಲ್ಲಾ ರಾಜಕಾರಣಿಗಳ ಮಕ್ಕಳೂ Industrialist ಆದರೆ ಸಾಮಾನ್ಯ ಜನರು ಇರೋ ಭೂಮಿಗೂ ಕುತ್ತು ಬರೋದರಲ್ಲಿ ಎರಡು ಮಾತಿಲ್ಲಾ.
 ಹೋಗಲಿ ಬಿಡಿ, ಇವರೆಂದು ಉದ್ಧಾರ ಆಗೋಲ್ಲಾ.. Sorry ಇವರೆಂದೂ ನಮ್ಮ ನಿಮ್ಮಂತಹ ಸಾಮಾನ್ಯರಿಗೆ ಉದ್ಧಾರ ಆಗೋಕೆ ಬಿಡೋಲ್ಲಾ. ಅಲ್ಲಾರಿ ಇವರು Open ಆಗಿ ಇಷ್ಟೊಂದು ಹಣ invest ಮಾಡತಾರಲ್ಲಾ ಅದೆಲ್ಲಾ ಹೆಂಗೆ ಅಂತಾ ? ಒಬ್ಬಂದು ಸಾವಿರ ಕೋಟಿ ಆದರೆ ಇನ್ನೊಬ್ಬನದು ಸಾವಿರಾರು ಕೋಟಿ,  ಇವರಿಗೆ income tax apply ಆಗೋದಿಲ್ವಾ.  ನಮ್ಮಂತಾ ಬಡಪಾಯಿಗಳು on-site ನಲ್ಲಿ ಅಲ್ಪ ಸ್ವಲ್ಪ ಉಳಿಸಿ transfer ಮಾಡಿದರೂ ಅದಕ್ಕಾಗಿ IT department ನವರು Notice ಕಳಿಸ್ತರಲ್ಲಾ ? ಗುಬ್ಬಿ ಮೇಲೇನಾ ಬ್ರಹ್ಮಾಸ್ತ್ರಾ ?
Ok sorry it is waste to talk about all these things..I know it is difficult to digest also, but nothing can be done. Go with the system. ಹುಚ್ಚು ಮುಂಡೆ ಮದುವೆಲಿ, ಉಂಡೆದ್ದವನೇ ಜಾಣ...
ಕೊನೆಗೂ November Fever ಮುಗಿತಾ ಬಂತು. ಹೀಗಂದಿದ್ದಕ್ಕೆ ಕೆಲವರಿಗೆ ಸಿಟ್ಟು ಬರಬಹುದು. ಆದರೆ ಏನು ಮಾಡೋದು ಬೇರೆ ವಿಧಿಯಿಲ್ಲಾ. ಕನ್ನಡ ಅನ್ನೋದು ಕೇವಲ November ಬಂದಾಗ ನೆನಪಾಗೋ ಜೋಕುಮಾರನ ಹಾಗೆ ಆಗಿಬಿಟ್ಟದ ಅನ್ನೋದು ಮಾತ್ರ ಸತ್ಯ. ದೀಪಾವಳಿಯಲ್ಲಿ ಸೆಗಣಿಲೆ ಪಾಂಡವರನ್ನ ಮಾಡಿ, ಅದಕ್ಕೆ ಹೂವಿನ ಅಲಂಕಾರ ಮಾಡಿ, ಮನೆ ಹೊರಕ್ಕೇ ಇಡೋ ಹಾಗೆ, November ಬಂದಾಗ ಕನ್ನಡ ಕನ್ನಡ ಅಂತಾ ಕೂಗಾಡಿ, Flexಗಳನ್ನ ಊರುತುಂಬಾ ಹಾಕಿ, ಸಾರ್ವಜನಿಕ ಸ್ಥಳಗಳಲ್ಲೆಲ್ಲಾ ಘೋಷಣೆಗಳನ್ನು ಗೀಚಾಡಿ, ಕನ್ನಡದ ಹೆಸರಿನಲ್ಲಿ ಮಜಾ ಮಾಡಿಬಿಟ್ಟರಾಯಿತು. "ಅ" ಕಾರಕ್ಕೂ "ಹ" ಕಾರಕ್ಕೂ ಇರುವ ವ್ಯತ್ಯಾಸ ತಿಳಿದುಕೊಳ್ಳದೇ, ಕೇವಲ ಕನ್ನಡದ ಬಗ್ಗೆ ಘೋಷಣೆ ಕೂಗಿದರೇನು ಉಪಯೋಗವಿಲ್ಲಾ, ಇದರಿಂದ ಕನ್ನಡ ಬೆಳೆಯೊಲ್ಲಾ, ಕುಲಗೆಟ್ಟು ಹೋಗುತ್ತೆ.  ಕನ್ನಡ ಅನ್ನೋದು ಕೇವಲ ಭಾಷೆಯಾಗಬಾರದು, ಅದು ನಮ್ಮೆಲ್ಲರ ನಾಡಿ ಮಿಡಿತ ಆಗಬೇಕು, ನಮ್ಮ ಮಕ್ಕಳ ಧಮನಿಗಳಲ್ಲಿ ನಲಿದಾಡಬೇಕು. ಅದಕ್ಕಾಗಿ ನಾವೆಲ್ಲಾ ದುರಭಿಮಾನಿಗಳಾಗೋದು ಬೇಡ, ಕಟ್ಟಾಭಿಮಾನಿಗಳಾಗೋಣ. ಕೇವಲ IT  ಜನರ ಮೇಲೆ ಗೂಬೆ ಕೂಡಿಸದೇ ಸರ್ವರಲ್ಲೂ ಕನ್ನಡಾಭಿಮಾನ ಮೂಡಿಸೋಣ. ಅತೀ ಹೆಚ್ಚು ಕನ್ನಡ ಮಾತನಾಡತಿರೋದು ನಮ್ಮ IT ಜನರೇ ಹೊರತು , BTS ಕಂಡಕ್ಟರುಗಳಲ್ಲಾ ಅನ್ನೋ ಸತ್ಯವನ್ನ ಜನರು ತಿಳಕೊಳ್ಳಬೇಕು. Engalish ನ ಗಂಧಗಾಳಿ ಗೊತ್ತಿಲ್ಲದ ರಾಜಕಾರಣಿಗಳು ಕೇವಲ National level Media ಬಂದಿದ್ದಾರೆ ಅನ್ನೋ ಕಾರಣಕ್ಕಾಗಿ ಹರಕು ಮುರಕು English ನಲ್ಲಿ ಮಾತಾಡಿ ತುಂಡು Of London ಅನ್ನೋದನ್ನ ಬಿಡಬೇಕು.
  ಅದೇನೆ ಆಗಲಿ, ಯಾರೇನೇ ಅನ್ನಲಿ, ನಾವು ಮಾತ್ರ ನಮ್ಮ ಭಾಷೆ, ಜನ , ನೆಲ , ಜಲಕ್ಕಾಗಿ ಕೈಯತ್ತೋದಕ್ಕಾಗಿ ಹಿಂದು ಮುಂದು ನೋಡೋದು ಬೇಡ. ನೀವೇನಂತೀರಾ ?
ಕೊನೆಯ ಹನಿ:  
ಕಾವ್ಯಾನಂದರ ಕವಿತಾ ನಿವೇದನೆಯ ಆಯ್ದ ಭಾಗ :
ಕನ್ನಡಕೆ ಹೋರಾಡು ಕನ್ನಡದ ಕಂದಾ, ಕನ್ನಡವ ಕಾಪಾಡೋ ನನ್ನ ಆನಂದಾ
ಜೋಗುಳದ ಹರಿಕೆಯಿದು ಮರೆಯದಿರು ಚಿನ್ನಾ, ಮರತೆಯಾದರೆ ಅಯ್ಯೋ ಮರೆತಂತೆ ನನ್ನಾ
ಮೊಲೆಯ ಹಾಲಂತಂತೆ ಸವಿಜೇನು ಬಾಯ್ಗೆ, ತಾಯ್ನುಡಿಗೆ ದುಡಿದು ಮಡಿ ಇಹ ಪರಗಳೇಳ್ಗೆ
ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನಾ, ಕನ್ನಡಮ್ಮನ ಕೋರಿಕೆ ಮರೆಯದಿರು ಚಿನ್ನಾ !!
ಪ್ರೀತಿ ಪೂರ್ವಕವಾಗಿ,
The complex mind...

Monday, October 18, 2010

They think from heart....

They don't have brain! but only heart ...
     ಇದೇನ ವಿಚಿತ್ರಾ ಅನ್ನಾಕತ್ತಿರಾ? ಇವರೆಲ್ಲಿಯವರಪಾ ತಲಿ ಇಲ್ದವರು, ತಲೀನ ಇಲ್ಲಂದವ್ಯಾಲೆ ಮನುಷ್ಯರೊ ಅಥವಾ ಮತ್ತೇನರನೋ, ಏನಿದರ ಮರ್ಮಾ ?. ಹೌದ್ರೀ ಸರ್..ಇದೊಂದು ತಲಿಕೆಡಿಸಿಗೊಳ್ಳೊ ಸಮಾಚಾರನ, ಇವರು ಜೀವಸೋ ರೀತಿ, ಇವರ ಹುಂಬತನ, ಇವರು ಮಾಡೊ ದೋಸ್ತಿ, ಬೇರೆಯವರನ್ನ ಗೌರವಿಸೋ ರೀತಿ, ಎಲ್ಲಾಕ್ಕಿಂತ ಹೆಚ್ಚಾಗಿ ಈ ಜನರು ತೋರೊ ಪ್ರೀತಿ, ಆದರ, ಅಭಿಮಾನ, ಈ ತರಹದ ಒಂದು ಕಲ್ಪನೆ ಹುಟ್ಟುಹಾಕೋದು ಸಹಜ ಅದ ನೋಡ್ರಿ. ಅವರು ಬೇರೆ ಯಾರೂ ಅಲ್ಲಾ, ನಮ್ಮವರೇ ಆದ "ಉತ್ತರ ಕರ್ನಾಟಕದ ಜನ".
       ಈ ಗಂಡುಮೆಟ್ಟಿನ ನಾಡಿನ ಜನರ ಗುಂಡಿಗೆ ಎಷ್ಟು ಗಟ್ಟಿಯಾಗಿದೆಯೋ, ಅದಕ್ಕಿಂತ ಜಾಸ್ತಿ ಅವರ ಮನಸ್ಸು soft ಅದ. ಬೇರೆಯವರಿಗಾಗಿ ತುಡಿಯುವ heart ಅದ, प्राण जाए पर वचन न जाय ಅನ್ನೋ ಛಲಾ ಅದ, ಕೊಟ್ಟ ಮಾತಿಗೆ ತಪ್ಪಲಾರೆನು ಅಷ್ಟ ಅಲ್ಲಾ ಕೆಟ್ಟ ಯೋಚನೆನೂ ಮಾಡಲಾರೆನು ಅನ್ನೋ ಮಾತಿಗೆ ಕಟ್ಟು ಬಿದ್ದು , ಮೈಮೇಲೆ ಸಾಗರದಷ್ಟು ಕಷ್ಟಗಳನ್ನ ಎಳಕೊಂಡಿದ್ದದ. ಮನೆಗೆ ಮಾರಿ , ಊರಿಗೆ ಉಪಕಾರಿ ಅನ್ನೋ ಮಾತಿಗೆ ಇವರು ಅತೀ ಸಮೀಪ ಇದ್ದಾರ. ಆದರ, ಮಾತಿನ್ಯಾಗ ಇದರ ತದ್ವಿರುದ್ಧ . ಕೆಲವು ಜನರಿಗಂತೂ ಉತ್ತರ ಕರ್ನಾಟಕದ ಭಾಷೆಯಂದ್ರ ಮೈಯಲ್ಲಾ ಉರಿಯುತ್ತೆ. Very rough slang!! sometimes it is really very difficult to daigest the words. But nothing can be done. It is a part of their culture. ಆ ಕೆಲವೊಂದು Typical words ಉಪಯೋಗ ಮಾಡದೇ ಇದ್ದ್ರ, ಮಾತಾಡಿದವನಿಗೂ, ಕೇಳುವನಿಗೂ ಏನೋ ಕಳಕೊಂಡಂಗ ಅನ್ನೋದಂತೂ ನಿಜಾ. ಪ್ರಾಣೇಶ ಗುಡಿ ( ಅಭಿನವ ಬೀchi )ಅವರ ಭಾಷಣಾ ಕೇಳೇ ತಿಳಕೊಳಬೇಕು ಈ ಭಾಷೆಯ ಗಮ್ಮತ್ತು.
       ಇದನ್ನೆಲ್ಲಾ ಇಲ್ಲ್ಯಾಕ ಬರಿತಿದ್ದೀನಿ ಅಂದ್ರ, ನಿನ್ನೆ ರಮೇಶ ಅಭಿನಯದ "Crazy ಕುಟುಂಬ" ಸಿನಿಮಾ ನೋಡಿದೆ. After long time, a good movie on North Karnataka life style. Till now, our own Kannada movies used this life, culture just for fun and sad thing is they did/do not have any other thought , insight of the power of this life style. On the other hand, they know that, if you need the real "Kannada" then it is again North Karnataka culture, and hence they picturaized all Kannada motive songs in Hubballi-Dharawad.
       Crazy ಕುಟುಂಬ ಒಮ್ಮೆ ನೋಡಲೇ ಬೇಕಾದ ಸಿನಿಮಾ. ಎಷ್ಟೇ ಕಷ್ಟ ಬಂದರೂ, ಮಗಳಿಗಾಗಿ, ಮೊಮ್ಮಗಳಿಗಾಗಿ ತಮ್ಮ ಮನೆಯನ್ನೇ ಯಾವುದೇ second thought ಇರದೇ ಅಡುವಿಡುವ ಪ್ರಸಂಗ,  ನನಗೇನಾಗೈತ್ರಿ, ಅರಾಮ ಅದಿನಿ ಅನ್ನೋ ಆ ಮನಿ ಯಜಮಾನತಿ, Step brother ಆದರೂ ಅಣ್ಣಾ ಅನ್ನೋ ಕಾರಣಕ್ಕಾಗಿ ಕುಸ್ತಿಯಲ್ಲಿ ಸೋಲೊ ತಮ್ಮಾ , ಇವೆಲ್ಲಾ ಸುಲಭದ ಮಾತಲ್ಲಾ . ಕೊನೆಯಲ್ಲಿ ರಮೇಶ ಹೇಳೊ ಮಾತುಗಳು ನಿಜಕ್ಕೂ ಅಭಿಮಾನಪಡುವಂತಹವು. These people think from heart ಅನ್ನೋ ಮಾತನ್ನ ತೋರಿಸಿ ಕೊಟ್ಟಿದ್ದಾರೆ.
       Apart from this, watched few events of Commonwealth game and felt really happy by the Indian performance but on the other hand felt very bad about the athletes' problems after reading about them. Why we or our Govt not trying to uplift, support those champions ? guess this is the question hit everyone's mind now.  Good that our Govt atleast announced  10Lac each to the individulas who won the gold. We all know, our villages have lot more talents like this but alas! no proper facilities, ground available and thus ಅನೇಕ ಸಸಿಗಳು ಚಿಗಿಯುವ ಮುನ್ನವೇ ಮುರಿದು ಬೀಳುತ್ತಿವೆ.  ಇದಕ್ಕೆಲ್ಲಾ ಪರಿಹಾರ ಇದೆಯೇ, ಇದೊಂದು Millian Doller ಪ್ರಶ್ನೆ....
   Got a Audi A4 car last week ( ofcourse second hand..can't dream of buying a new Audi with this salary... :))  will write about that next time.

ಕೊನೆಯ ಹನಿ : ಓ ನನ್ನ ಚೇತನ ಆಗು ನೀ ಅನಿಕೇತನ..  ರೂಪ ರೂಪಗಳನು ದಾಟಿ , ನಾಮಕೋಟಿಗಳನು ದಾಟಿ   ( ಕುವೆಂಪುರವರ ಕವನದ ಸಾಲು )

ಪ್ರೀತಿ ಪೂರ್ವಕವಾಗಿ,
The complex mind...